ಧಾರವಾಡ, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರಕಾರದ ನಿರ್ದೇಶನದ ಹಿನ್ನಲೆಯಲ್ಲಿ ಸೆ.15 ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತವಾಗಿ ಸೆ.09 ರಂದು ಧಾರವಾಡ ವಾರ್ತಾ ಇಲಾಖೆಯ ವಾರ್ತಾಭವನದಲ್ಲಿ ವಿದ್ಯಾರ್ಥಿಗಳಿಗೆ, ಛಾಯಾಗ್ರಾಹಕರಿಗೆ ಪ್ರಜಾಪ್ರಭುತ್ವ ಕುರಿತ ಛಾಯಾಚಿತ್ರ ಸ್ಪರ್ಧೆ ಮತ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ.
ಸ್ಫರ್ಧೆಗೆ ಎಲ್ಲರಿಗೂ ಮುಕ್ತ ಅವಕಾಶವಿದ್ದು, ವಿದ್ಯಾರ್ಥಿಗಳಿಗೆ ಆದ್ಯತೆ ಇರುತ್ತದೆ. ಪ್ರಜಾಪ್ರಭುತ್ವ ಕುರಿತು ಛಾಯಾಚಿತ್ರಗಳ ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ ಮತದಾನ, ಮತದಾನ ಪ್ರಚಾರ, ಮತಗಟ್ಟೆ, ಮತದಾನಕ್ಕೆ ಸಂಭಂದಿಸಿದ ಚಿತ್ರಗಳನ್ನು ಪ್ರದರ್ಶಿಸಬಹುದಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಛಾಯಾಗ್ರಾಹಕರು 8 x 12 ಸೈಜಿನ ಫೋಟೋಗಳನ್ನು ಪ್ರದರ್ಶನಕ್ಕೆ ನೀಡಬಹುದು. ಒಬ್ಬ ಛಾಯಾಗ್ರಾಹಕ 2 ಫೋಟೋಗಳನ್ನು ಪ್ರದರ್ಶಿಸಬಹುದು.
ಸ್ಪರ್ಧೆಗೆ ಕಳುಹಿಸುವ ಛಾಯಾಚಿತ್ರಗಳು ಸ್ವಂತದ್ದಾಗಿರಬೇಕು. ಛಾಯಾಚಿತ್ರಗಳ ಆಯ್ಕೆಯಲ್ಲಿ ತೀರ್ಪುಗಾರರ ತೀರ್ಮಾನವೆ ಅಂತಿಮವಾಗಿರುತ್ತದೆ. ಸ್ಪರ್ಧೆಯಲ್ಲಿ ಆಯ್ಕೆ ಆಗುವ ಛಾಯಾಚಿತ್ರಗಳನ್ನು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರದರ್ಶಿಸಲಾಗುತ್ತದೆ.
ಸೆ. 9 ರಂದು ಬೆಳಿಗ್ಗೆ 9:30 ರಿಂದ 11 ಗಂಟೆಯೊಳಗೆ ಆಸಕ್ತರು ತಮ್ಮ ಛಾಯಾಚಿತ್ರಗಳನ್ನು ಪ್ರದರ್ಶಿಸಬಹುದು. ನಂತರ ಹಿರಿಯ ಮತ್ತು ತಜ್ಞ ಛಾಯಾಗ್ರಾಹಕರು ಇರುವ ಆಯ್ಕೆ ಸಮಿತಿಯಿಂದ ಉತ್ತಮ ಛಾಯಾಚಿತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಮಧ್ಯಾಹ್ನ 12 ಗಂಟೆಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ಥಳದಲ್ಲಿಯೇ ಮುಖ್ಯ ಅತಿಥಿಗಳು ಪ್ರಮಾಣಪತ್ರ ವಿತರಿಸುತ್ತಾರೆ.
ಆಸಕ್ತರು, ನಾಳೆ ಸೆ.08 ರ ಸಂಜೆ ಐದು ಗಂಟೆಯೊಳಗೆ ವರ್ತಾ ಇಲಾಖೆ ಕಚೇರಿಯಲ್ಲಿ ಸಂಜೆ 5. ಗಂಟೆಯೊಳಗೆ ಖುದ್ದಾಗಿ ಅಥವಾ ದೂರವಾಣಿ: 9538076619 ಅಥವಾ 81238 69108 ಗೆ ಮತ್ತು ಪೋಟೊಗ್ರಾಫರ್ ಸಂಘದ ಪ್ರಮುಖರಾದ ದತ್ತಪ್ರಸಾದ ವೆಂಕಟೇಶ್- 9845128653 , ಕಿರಣ ಬಾಕಳೆ -94481 36285
ಪ್ರಭಯ್ಯ ಲಕ್ಕುಂಡಿಮಠ - 9986268406 ಅವರನ್ನು ಸಂಪರ್ಕಿಸಲು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ ಹಾಗೂ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ಎಂ.ಹಿರೇಮಠ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa