ಕೊಪ್ಪಳ, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾಗ್ಯನಗರದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ 1987-88 ರಿಂದ 1997- 98 ನೇ ಸಾಲಿನ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಂದ ಇದೇ ತಿಂಗಳು 13 ಮತ್ತು 14 ಕ್ಕೆ ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿದ್ಯಾರ್ಥಿಗಳ ಪರ ಶ್ರೀಧರ ಹುರಕಡ್ಲಿ ಅವರು ತಿಳಿಸಿದ್ದಾರೆ.
ಅವರು ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 13 ನೇ ತಾರೀಕು 3 ಗಂಟೆಗೆ ಪರಸ್ಪರ ವಿದ್ಯಾರ್ಥಿಗಳ ವೃತ್ತಿ ಪರಿಚಯ, ಗೆಳತಿಯರಿಗೆ ತವರು ಮನೆ ಉಡುಗೊರೆ ಕಾರ್ಯಕ್ರಮಗಳು ಜರುಗುವವು.
14 ರ ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಪ.ಪೂ ಶಿವರಾಮಕೃಷ್ಣನಂದ ಭಾರತಿ ಮಹಾಸ್ವಾಮಿಗಳು ವಹಿಸುವರು, ಉಪಸ್ಥಿತರಿದ್ದ ಎಲ್ಲಾ ಗುರುಗಳಿಗೆ ಸನ್ಮಾನ ಕಾರ್ಯಕ್ರಮ 11 ಗಂಟೆಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರ ಅನಿಸಿಕೆ ನಂತರ ಗುರುಗಳ ಹಿತವಚನ ಹಾಗೂ ಅತಿಥಿಗಳ ಭಾಷಣ ನಂತರ ಮಧ್ಯಾಹ್ನ 1 ಗಂಟೆಗೆ ಭೋಜನ ಕೂಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಅಮುಲ್ ಕಠಾರೆ , ಅಣ್ಣೇಶ್ ಕಬ್ಬೇರ್, ಶರಣಪ್ಪ ಮಗಿ ಮಾವಿನಹಳ್ಳಿ, ಸುರೇಶ್ ಬಣ್ಣದ, ಗಿರಿಜಾ ಬೇಳೂರು, ಶ್ಯಾಮಲಾ ಅರವಟ್ಟಿಗೆ, ಹಾಗೂ 1997- 98 ನೇ ಸಾಲಿನ 1 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ಸಹಪಾಠಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್