ಬಳ್ಳಾರಿ ಬೆತೆಸ್ಥ ಶಾಲೆಯಲ್ಲಿ 22 ಶಿಕ್ಷಕರಿಗೆ ಅಭಿನಂದನೆ
ಬಳ್ಳಾರಿ, 07 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಶಿಕ್ಷಕರ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ಬೆತೆಸ್ಥ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 22 ಶಿಕ್ಷಕರಿಗೆ `ಗುರು ಗೌರವ’ ಪ್ರಶಸ್ತಿಯನ್ನು ನೀಡಿ, ಗೌರವಿಸಿ ಅಭಿನಂದಿಸಲಾಯಿತು. ಎಸ್‍ಆರ್‍ಪಿ ಕ್ಲಸ್ಟರ್‍ನ ಸಿಆರ್‍ಪಿ ಮಹಮ್ಮದ್ ಅವರು, ಕಾರ್ಯಕ್ರ
ಬಳ್ಳಾರಿ : ಬೆತೆಸ್ಥ ಶಾಲೆಯಲ್ಲಿ 22 ಶಿಕ್ಷಕರಿಗೆ ಅಭಿನಂದನೆ


ಬಳ್ಳಾರಿ : ಬೆತೆಸ್ಥ ಶಾಲೆಯಲ್ಲಿ 22 ಶಿಕ್ಷಕರಿಗೆ ಅಭಿನಂದನೆ


ಬಳ್ಳಾರಿ, 07 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಶಿಕ್ಷಕರ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ಬೆತೆಸ್ಥ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 22 ಶಿಕ್ಷಕರಿಗೆ `ಗುರು ಗೌರವ’ ಪ್ರಶಸ್ತಿಯನ್ನು ನೀಡಿ, ಗೌರವಿಸಿ ಅಭಿನಂದಿಸಲಾಯಿತು.

ಎಸ್‍ಆರ್‍ಪಿ ಕ್ಲಸ್ಟರ್‍ನ ಸಿಆರ್‍ಪಿ ಮಹಮ್ಮದ್ ಅವರು, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಿಕ್ಷಕ ವೃತ್ತಿ ಸುಲಭವಲ್ಲ. ದೇವರ ಸಮಾನವಾದ, ದೇಶ ಕಟ್ಟುವ ಜವಾಬ್ದಾರಿ ಹೊಂದಿರುವ ಮತ್ತು ಸಮಾಜವನ್ನು ಸದಾಕಾಲ ಒಳ್ಳೆಯದಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಅತ್ಯಂತ ಸವಾಲಿನ ವೃತ್ತಿ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್‍ಆರ್ ಕಾಲೋನಿ ಸರ್ಕಾರಿ ಶಾಲೆಯ ಸಹಶಿಕ್ಷಕಿ ಡಾ. ಕಲ್ಯಾಣಿ ಅವರು, ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಲು ಶಿಕ್ಷಕರು ಮಕ್ಕಳು ಮತ್ತು ಪೋಷಕರನ್ನು ಹಿಂಬಾಲಿಸಿ ಪರಿ ಪರಿಯಾಗಿ ಬೇಡಿಕೊಳ್ಳುವ ಸ್ಥಿತಿ ಇಂದಿದೆ. ಗುರು - ಶಿಷ್ಯರ ಸಂಬಂಧ ಕೇವಲ ಶಾಲೆಯ ತರಗತಿಗಳಿಗೆ ಮಾತ್ರ ಸೀಮಿತವಾಗಿದೆ ಎಂದರು.

ಇನ್‍ಫ್ಯಾಂಟ್ ಜೀಸಸ್ ಶಾಲೆಯ ಮೆಹಮೂಬ್ ಭಾಷಾ ಅವರು, ಮಕ್ಕಳು ಶಾಲೆಯಲ್ಲಿರುವಾಗ ಮಾತ್ರ ಶಿಕ್ಷಕರನ್ನು ಗೌರವಿಸುವ ದಿನಗಳು ಬಂದಿವೆ. ಪ್ರತಿ ಮಗುವನ್ನು ತಮ್ಮದೇ ಮಗು ಎಂದುಕೊಂಡು ಅಕ್ಷರ ಕಲಿಸುವ ಶಿಕ್ಷಕರಿಗೆ ಜೀವಮಾನದುದ್ದಕ್ಕೂ ಗೌರವ ಸಲ್ಲಬೇಕು ಎಂದರು.

ಬೆತೆಸ್ಥ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಭೂ ಪ್ರಕಾಶ್ ಅವರು, ನಮ್ಮ ತಾಯಿ ಸುಶೀಲಾಬಾಯಿ ಅವರು ನಾನಾ ಶಾಲೆಗಳಲ್ಲಿ ಸಹಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ 1998ರಲ್ಲಿ ನಿವೃತ್ತಿ ಹೊಂದಿದರು. ಆನಂತರ ಬಡ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬ ಆಸೆಯಿಂದ ಬೆತೆಸ್ಥ ಶಾಲೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಶಿಕ್ಷಕರಾದ ವಿ. ಶ್ರ್ರಾವಂತಿ, ಎನ್. ಶಾರದ, ಡಾ. ಕಲ್ಯಾಣಿ ವೈ, ಫಾತೀಮಾ ಮೇರಿ, ಎಸ್. ಶಶಿರೇಖಾ, ಕೆ.ಸಿ. ಲಕ್ಷ್ಮೀದೇವಿ, ಕೆ.ಎಲ್. ಸೋಮಶೇಖರ್, ಚಂದ್ರಿಕಾ ಎನ್, ಹೊನ್ನೂರಪ್ಪ, ಶಾಯಿದಾ ಶಬೀನ, ವಿಜಯಕುಮಾರಿ, ನೀಲ, ಜಿ. ವೇಣುಬಾಯಿ, ಮೆಹಬೂಬ್ ಭಾಷಾ, ಎಸ್.ಎ. ಹಸೀನಾ ಬಾನು, ವಿ. ಕಾವೇರಿ ಮಿತ್ತಲ್ ಹಾಗೂ ಸಿಆರ್‍ಪಿ ಮಹಮ್ಮದ್ ಅವರಿಗೆ ಎಂವಿಎಸ್ ಸುಶೀಲಾಬಾಯು ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ - ಅಭಿನಂದಿಸಲಾಯಿತು.

ಬೆತೆಸ್ಥ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ ಎಂ.ವಿ.ಎಸ್. ಸುಶೀಲಾಬಾಯಿ, ಪ್ರಧಾನ ಕಾರ್ಯದರ್ಶಿ ರಾಕೇಶ್.ವಿ., ಖಜಾಂಚಿ ಸುನೀಲ್ ಕುಮಾರ್, ಲಿಟಲ್ ಏಂಜೆಲ್ ಶಾಲೆಯ ಆಡಳಿತಾಧಿಕಾರಿ ಮಹಮ್ಮದ್ ಮುಸ್ತಾಫ್ ಅವರು ವೇದಿಕೆಯಲ್ಲಿದ್ದರು.

ಶಿಕ್ಷಕಿ ಲಕ್ಷ್ಮೀ ಅವರು ಸ್ವಾಗತಿಸಿದರು. ಶಿಕ್ಷಕರಾದ ಇಂದಿರಾ ಹಾಗೂ ಭಾರತಿ ಅವರು ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande