ಬೆಳಗಾವಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಿದ್ಧತೆ
ಬೆಳಗಾವಿ, 06 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬೆಳಗಾವಿಯಲ್ಲಿ ಕಳೆದ 10 ದಿನಗಳಿಂದ ಭಕ್ತರ ಮನೆಗಳಲ್ಲಿ ಹಾಗೂ ಸಾರ್ವಜನಿಕ ಮಂಡಳಿಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಣೇಶ ಮೂರ್ತಿಗಳಿಗೆ ಇಂದು ಅಂತಿಮ ವಿದಾಯ. ನಗರದಲ್ಲಿ 400ಕ್ಕೂ ಅಧಿಕ ಹಾಗೂ ಜಿಲ್ಲೆಯಾದ್ಯಂತ 6,356 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸ
Ganesh


ಬೆಳಗಾವಿ, 06 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬೆಳಗಾವಿಯಲ್ಲಿ ಕಳೆದ 10 ದಿನಗಳಿಂದ ಭಕ್ತರ ಮನೆಗಳಲ್ಲಿ ಹಾಗೂ ಸಾರ್ವಜನಿಕ ಮಂಡಳಿಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಣೇಶ ಮೂರ್ತಿಗಳಿಗೆ ಇಂದು ಅಂತಿಮ ವಿದಾಯ. ನಗರದಲ್ಲಿ 400ಕ್ಕೂ ಅಧಿಕ ಹಾಗೂ ಜಿಲ್ಲೆಯಾದ್ಯಂತ 6,356 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಲಕ್ಷಾಂತರ ಭಕ್ತರು ದರ್ಶನ ಪಡೆದಿದ್ದಾರೆ.

ನಗರದ ಹುತಾತ್ಮ ಚೌಕ್‌ನಿಂದ ಸಂಜೆ 5ಕ್ಕೆ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ರಾಮದೇವ ಗಲ್ಲಿ, ಕಾಲೇಜು ರಸ್ತೆ, ಕಿರ್ಲೋಸ್ಕರ್ ರಸ್ತೆ, ಟಿಳಕ ಚೌಕ್ ಮಾರ್ಗವಾಗಿ ಕಪಿಲೇಶ್ವರ ದೇವಸ್ಥಾನದ ಹೊಂಡ ತಲುಪಲಿದೆ. ಸುಮಾರು 30 ಗಂಟೆಗಳ ಕಾಲ ಈ ಮೆರವಣಿಗೆ ನಡೆಯುವ ನಿರೀಕ್ಷೆ.

ಗಣೇಶ ಮೂರ್ತಿ ವಿಸರ್ಜನೆಗೆ ಕಪಿಲೇಶ್ವರದ ಹೊಸ ಹಾಗೂ ಹಳೆಯ ಹೊಂಡ, ಜಕ್ಕೇರಿ ಹೊಂಡ, ಕೋಟೆ ಕೆರೆ, ಕಣಬರ್ಗಿ ಕೆರೆ, ಅನಗೋಳದ ಲಾಲ್ ತಾಲಾಬ್, ಮಜಗಾವಿ ಕೆರೆ ಸೇರಿ ಅನೇಕ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೃಹತ್ ಮೂರ್ತಿಗಳಿಗೆ ಕ್ರೇನ್, ಈಜುಪಟು ಹಾಗೂ ವೀಕ್ಷಕರ ಗ್ಯಾಲರಿಯನ್ನೂ ಸಿದ್ಧಪಡಿಸಲಾಗಿದೆ.

ಭದ್ರತೆಗೆ 4,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದ್ದು, 500 ಅಧಿಕಾರಿ–ಸಿಬ್ಬಂದಿ, 10 ಕೆಎಸ್‌ಆರ್‌ಪಿ, 9 ಕೇಂದ್ರ ಮೀಸಲು ಪಡೆ ತುಕಡಿ, ಕ್ಷಿಪ್ರ ಕಾರ್ಯಾಚರಣೆ ಪಡೆ, ಹೋಮ್‌ಗಾರ್ಡ್ಸ್ ಸೇರಿದಂತೆ ದೊಡ್ಡ ಮಟ್ಟದ ಬಂದೋಬಸ್ತು ಕೈಗೊಳ್ಳಲಾಗಿದೆ. 700 ಸಿಸಿಟಿವಿ ಕ್ಯಾಮರಾ ಹಾಗೂ 14 ಡ್ರೋಣ್ ಮೂಲಕ ಮೆರವಣಿಗೆಯ ಮೇಲೆ ನಿಗಾ ವಹಿಸಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande