ವಿಜಯಪುರ, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಆಲಮಟ್ಟಿ ಡ್ಯಾಂ 542 ಮೀಟರ್ ಏರಿಕೆ ಮಾಡೋಕೆ ನಮ್ಮ ಸರ್ಕಾರ ಸಿದ್ಧ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇವೆ. ಎರಡು ಬಾರಿ ಕೇಂದ್ರ ಆಯೋಜನೆ ಮಾಡಿರುವ ಸಭೆ ಮುಂದೂಡಲಾಗಿದೆ. ಈಗ 100 ಟಿಎಂಸಿ ನೀರು ಸಮುದ್ರ ಪಾಲಾಗಿದೆ. ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರದಲ್ಲಿ ಮುಳುಗಡೆ ಭೂಮಿಗೆ ದರ ನಿಗದಿ ಮಾಡಿದ್ದರು. ಆ ದರ ಸರಿಯಾಗಿಲ್ಲ ಎಂಬ ಕೂಗು ಕೇಳಿ ಬಂದಿದೆ. ಈ ವಿಚಾರದಲ್ಲಿ ಹಲವಾರು ಸಚಿವರ ಸಭೆ ಮಾಡಿದ್ದೇವೆ. 20,000 ಕೇಸ್ ಕೋರ್ಟ್ ಗೆ ಹೋಗುತ್ತಿವೆ. ವಕೀಲರು ಹೇಳುತ್ತಿರೋದು ಎಲ್ಲ ಸರಿಯಿಲ್ಲ ರೈತರಿಗೆ ನ್ಯಾಯ ಸಿಗಲ್ಲ. ಕೇಂದ್ರವೂ ಸಹ ಸಹಕಾರ ನೀಡಬೇಕು. ಭೂಸ್ವಾದೀನಕ್ಕೆ ಸೂಕ್ತ ದರ ನಿಗದಿ ಮಾಡುತ್ತೇವೆ. ಮುಳುಗಡೆಯಾಗುವವರಿಗೆ ನ್ಯಾಯ ನೀಡುತ್ತೇವೆ. ವಿಜಯಪುರ ಬಾಗಲಕೋಟೆ ಜಿಲ್ಲೆಯ ಸಚಿವರು, ಶಾಸಕರ ಸಲಹೆ ನೀಡಿದ್ದಾರೆ. ರೈತರಿಗೆ ಒನ್ ಟೈಂ ಕನ್ಸರ್ ಗೆ ಅವಕಾಶ ನೀಡಿ, ಉಳಿದ ವಿಚಾರಕ್ಕೆ ಸರ್ಕಾರ ರೈತರ ಪರವಾಗಿ ನಿಲ್ಲಲಿದೆ. ಹೆಚ್ವಿನ ನೀರು ನಿಲ್ಲಿಸುವ ಆಸೆ ಸರ್ಕಾರಕ್ಕಿದೆ. ನಮ‌್ಮ ಅವಧಿಯಲ್ಲಿಯೇ ಡ್ಯಾಂ ಎತ್ತರ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande