ವಿಜಯಪುರ, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಕೃಷ್ಣೆಯ ಜಲಧಿಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ಆಲಮಟ್ಟಿ ಬಳಿಯ ಕೃಷ್ಣಾ ನದಿಗೆ ನಿರ್ಮಿಸಲಾದ ಜಲಾಶಯಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಜಂಟಿಯಾಗಿ ಶನಿವಾರ ಗಂಗಾ ಪೂಜೆ ಮತ್ತು ಬಾಗಿನ ಅರ್ಪಣೆ ಮಾಡಿದರು.
ಅರ್ಚಕ ಗೋಪಾಲಾಚಾರ್ಯ ಹಿಪ್ಪರಗಿ ನೇತೃತ್ವದಲ್ಲಿ ಡ್ಯಾಂನ್ ಕಸ್ಟ್ ಗೇಟ್ ಗಳ ಮೇಲೆ ಪೂಜೆಗೆ ಹಾಗೂ ಬಾಗಿನ ಅರ್ಪಣೆ ಮಾಡಲಾಯಿತು.
ಪ್ರತಿ ವರ್ಷ, ಮುಖ್ಯಮಂತ್ರಿ ಡ್ಯಾಂ ಹಿನ್ನಿರಿನ ಬಳಿ ಗಂಗಾಪೂಜೆ ಬಾಗಿನ ಅರ್ಪಣೆ ನೆರವೇರಿಸುತ್ತಿದ್ದರು. ಆದರೆ, ಈ ಬಾರಿ ಡ್ಯಾಂನ ಮೇಲ್ಬಾಗದಿಂದಲೇ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿದರು.
ಅಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮೊಣಕಾಲು ನೋವಿರುವ ಕಾರಣ ಡ್ಯಾಂ ಮೇಲ್ಬಾಗದಲ್ಲಿಯೇ ಅರ್ಪಣೆ ವ್ಯವಸ್ಥೆ ಮಾಡಿ, ನೆರವೇರಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande