ವಿಜಯಪುರ, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಇಂದು ಕೃಷ್ಣೆಗೆ ಗಂಗಾಪೂಜೆ ಬಾಗಿನ ಅರ್ಪಿಸಿದ್ದೇವೆ. ಜಲಾಶಯ ಭರ್ತಿಯಾಗಿದೆ. ಕಳೆದ ಬಾರಿ ಇಲ್ಲಿ ಬಂದು ಬಾಗೀನ ಅರ್ಪಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಕಾರಣ ಜಲಾಶಯ ಭರ್ತಿಯಾಗಿದೆ. ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿದೆ. ಕಬಿನಿ, ಕಾವೇರಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿದ್ದಕ್ಕೆ ರೈತರು ಖುಷಿಯಾಗಿದ್ದಾರೆ. ರೈತರು ಖುಷಿಯಾಗಿದ್ದರೆ ನಾವೂ ಖುಷಿಯಾಗಿರುತ್ತೇವೆ. ಯುಕೆಪಿ ಯೋಜನೆ ಕುರಿತು ಡಿ.ಕೆ.ಶಿ ಎಲ್ಲ ವಿಚಾರ ಹೇಳಿದ್ದಾರೆ. ನಮ್ಮ ರೈತ ಹೋರಾಟಗಾರರ ಸಭೆ ಬೆಳಗಾವಿಯಲ್ಲಿ ಮಾಡಿದ್ದೇವೆ.
ಕನ್ಸೆಂಟ್ ಅವಾರ್ಡ್ ಮಾಡಬೇಕೆಂದು ರೈತರು ಮನವಿ ಮಾಡಿದ್ದಾರೆ. ಅದಕ್ಕೆ ನಾವೂ ಒಪ್ಪಿದ್ದೇವೆ. ಡಿ.ಕೆ.ಶಿ ಈ ಭಾಗದ ಸಚಿವರು ಶಾಸಕರ ಸಭೆ ಮಾಡಿದ್ದಾರೆ. ಎಲ್ಲ ಒಂದು ಹಂತಕ್ಕೆ ಬಂದಿದೆ ಎಂದರು.
ಮುಂದಿನ ವಾರದಲ್ಲಿ ನಾವೆಲ್ಲ ಸಭೆ ಮಾಡಿ ಸೂಕ್ತ ದರ ನಿಗದಿ ಮಾಡುತ್ತೇವೆ. ಮುಳುಗಡೆ ಜಮೀನಿಗೆ ದರ ನಿಗದಿ ಮಾಡುತ್ತೇವೆ. ರೈತರು ಯಾರೂ ಕೋರ್ಟ್ ಗೆ ಹೋಗಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಕೋರ್ಟಗೆ ಹೋಗುವ ಕಾರಣ ವಿಳಂಭವಾಗುತ್ತದೆ. ಕನ್ಸಂಟ್ ಅವಾರ್ಡ್ ದಿಂದ ಎಲ್ಲರೂ ಒಪ್ಪಿಕೊಂಡು ಮಾಡಲಾಗುತ್ತದೆ. ಮುಂದಿನ ವಾರದಲ್ಲಿ ದರ ನಿಗದಿ ಮಾಡುತ್ತೇವೆ. ಯುಕೆಪಿ ಮೂರನೇ ಹಂತ 524 ಮೀಟರ್ ಎತ್ತರ ಮಾಡುವ ಕಾರಣ 130 ಟಿಎಂಸಿ ನೀರು ಬಳಕೆಗೆ ಸಿಗುತ್ತದೆ. ಯುಕೆಪಿ ಮೂರನೇ ಹಂತದ ಯೋಜನೆ ಗೆಜೆಟ್ ನೊಟೀಫೀಕೇಷನ್ ಆಗಿಲ್ಲ. ಆದರೆ ಎಲ್ಲ ಕೆಲಸ ಕಾಮಗಾರಿಗಳಿಗೆ ಅನಕೂಲವಾಗುತ್ತದೆ. ಒಮ್ಮೆ ಪ್ರಧಾನಿ ಹಾಗೂ ಎರಡು ಬಾರಿ ಕೇಂದ್ರ ಜಲ ಸಂಪನ್ಮೂಲ ಸಚಿವರು ಭೇಟಿಯಾಗಿದ್ದೇನೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande