ಗಣೇಶ ವಿಸರ್ಜನೆ ವೇಳೆ ವಿದ್ಯುತ್ ತಂತಿ ತಗುಲಿ ಯುವಕ ಸಾವು
ವಿಜಯಪುರ, 03 ಸೆಪ್ಟೆಂಬರ್ (ಹಿ.ಸ.) : ವಿಜಯಪುರ : ಏಳನೇ ದಿನದ ಗಣೇಶ ವಿಸರ್ಜನೆ ವೇಳೆ ಅವಘಡ ಸಂಭವಿಸಿದೆ. ವಿಜಯಪುರ ನಗರದ ಗಾಂಧಿಚೌಕ್ ವೃತ್ತದ ಬಳಿಯ ಟಾಂಗಾ ಸ್ಟ್ಯಾಂಡ್ ಬಳಿ ನಿನ್ನೆ ತಡರಾತ್ರಿ ವಿದ್ಯುತ್ ತಂತಿ ಮೇಲೆತ್ತುವ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಗರದ ಡೋ
ಗಣೇಶ ವಿಸರ್ಜನೆ ವೇಳೆ ವಿದ್ಯುತ್ ತಂತಿ ತಗುಲಿ ಯುವಕ ಸಾವು


ವಿಜಯಪುರ, 03 ಸೆಪ್ಟೆಂಬರ್ (ಹಿ.ಸ.) :

ವಿಜಯಪುರ : ಏಳನೇ ದಿನದ

ಗಣೇಶ ವಿಸರ್ಜನೆ ವೇಳೆ ಅವಘಡ ಸಂಭವಿಸಿದೆ. ವಿಜಯಪುರ ನಗರದ ಗಾಂಧಿಚೌಕ್ ವೃತ್ತದ ಬಳಿಯ ಟಾಂಗಾ ಸ್ಟ್ಯಾಂಡ್ ಬಳಿ ನಿನ್ನೆ ತಡರಾತ್ರಿ ವಿದ್ಯುತ್ ತಂತಿ ಮೇಲೆತ್ತುವ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ನಗರದ ಡೋಬಲೆ ಗಲ್ಲಿ ನಿವಾಸಿ

ಶುಭಂ ಸಂಕಳ (21) ಮೃತ ಯುವಕ.‌ ಗಣೇಶನ ಮೂರ್ತಿ ಸಾಗಲು ಕೋಲಿನಿಂದ ವಿದ್ಯುತ್ ತಂತಿ ಎತ್ತುವ ವೇಳೆ ಕರೆಂಟ್ ಶಾಕ್‌ನಿಂದ ಅಸುನೀಗಿದ್ದಾನೆ.‌

ಘಟನೆ ನಡೆದ ಕೂಡಲೇ ಎಲ್ಲ ಗಣೇಶನ ಮೂರ್ತಿಗಳನ್ನು ಪೊಲೀಸರು ಕಳುಹಿಸಿದರು.

ನಗರದಲ್ಲಿ ಏಳನೇ ದಿನ ನೂರಾರು ಗಣೇಶನ ಮೂರ್ತಿಗಳು‌ ವಿಸರ್ಜನೆ ಮಾಡಲಾಯಿತು.

ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande