ಶಾರ್ಜಾ, 03 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಶಾರ್ಜಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಅಫ್ಘಾನಿಸ್ತಾನ ತಂಡ ಮಂಗಳವಾರ ರಾತ್ರಿ ಪಾಕಿಸ್ತಾನ ವಿರುದ್ಧ 18 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಅಫ್ಘಾನಿಸ್ತಾನದ ಗೆಲುವಿನಲ್ಲಿ ಇಬ್ರಾಹಿಂ ಜದ್ರಾನ್ (65 ರನ್) ಮತ್ತು ಸಿದ್ದಿಕುಲ್ಲಾ ಅಟಲ್ (64 ರನ್) ಅವರ ಅದ್ಭುತ ಅರ್ಧಶತಕಗಳು ಹಾಗೂ ಬೌಲರ್‌ಗಳ ಒಟ್ಟಾರೆ ಪ್ರದರ್ಶನ ಪ್ರಮುಖ ಪಾತ್ರವಹಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 169/5 ರನ್‌ಗಳನ್ನು ಗಳಿಸಿತು.
ಆರಂಭಿಕ ಆಟಗಾರ ರಹಮಾನಲ್ಲಾ ಗುರ್ಬಾಜ್ ಶೀಘ್ರದಲ್ಲೇ ಔಟಾದರೂ, ಅಟಲ್–ಇಬ್ರಾಹಿಂ ಜೋಡಿ 113 ರನ್‌ಗಳ ಅಮೂಲ್ಯ ಪಾಲುದಾರಿಕೆಯಿಂದ ತಂಡವನ್ನು ಬಲಪಡಿಸಿದರು. ಕೊನೆಯ ಹೊತ್ತಿನಲ್ಲಿ ಮೊಹಮ್ಮದ್ ನಬಿ ವೇಗದ ಇನ್ನಿಂಗ್ಸ್ ಆಡಿ ಸ್ಕೋರ್‌ನ್ನು ಹೆಚ್ಚಿಸಿದರು. ಪಾಕಿಸ್ತಾನ ಪರ ಫಹೀಮ್ ಅಶ್ರಫ್ (4/27) ಅತ್ಯುತ್ತಮ ಬೌಲಿಂಗ್ ಮಾಡಿದರು.
ಗುರಿ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭ ನೀಡಿದರೂ, ಮಧ್ಯಮ ಕ್ರಮದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು. ನೂರ್ ಅಹ್ಮದ್ (2/20), ಮೊಹಮ್ಮದ್ ನಬಿ (2/20) ಹಾಗೂ ರಶೀದ್ ಖಾನ್ ಅವರ ಮಾರಕ್ ಬೌಲಿಂಗ್ ಎದುರಿಸಲು ಪಾಕಿಸ್ತಾನಿ ಬ್ಯಾಟರ್‌ಗಳು ವಿಫಲರಾದರು. ಕೊನೆಯಲ್ಲಿ ಹ್ಯಾರಿಸ್ ರೌಫ್ (34)* ಸಿಕ್ಸರ್‌ಗಳಿಂದ ಹೋರಾಟ ಮಾಡಿದರೂ, ಪಾಕಿಸ್ತಾನ 151/9 ರನ್‌ಗಳಿಗೆ ಸೀಮಿತವಾಯಿತು.
ಸಂಕ್ಷಿಪ್ತ ಸ್ಕೋರ್‌ಗಳು
ಅಫ್ಘಾನಿಸ್ತಾನ: 169/5 (20 ಓವರ್‌ಗಳು) – ಇಬ್ರಾಹಿಂ ಜದ್ರಾನ್ 65, ಸಿದ್ದಿಕುಲ್ಲಾ ಅಟಲ್ 64; ಫಹೀಮ್ ಅಶ್ರಫ್ 4/27
ಪಾಕಿಸ್ತಾನ: 151/9 (20 ಓವರ್‌ಗಳು) – ಹ್ಯಾರಿಸ್ ರೌಫ್ 34*, ಫಖರ್ ಜಮಾನ್ 25; ನೂರ್ ಅಹ್ಮದ್ 2/20, ಮೊಹಮ್ಮದ್ ನಬಿ 2/20
ಫಲಿತಾಂಶ : ಅಫ್ಘಾನಿಸ್ತಾನ 18 ರನ್‌ಗಳಿಂದ ಜಯ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa