ತಾವರಗೆರ, 03 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ತಾವರಗೆರೆಯ ಸ್ವರ ಸೌರಭ ಸಂಗೀತ ಮತ್ತು ಲಲಿತಕಲಾ ಸಂಸ್ಥೆಯು ತಾವರಗೆರೆಯ ವಿಶ್ವಚೇತನ ಪ್ರೌಢ ಶಾಲೆಯ ಆವರಣದಲ್ಲಿ `ಸ್ವರ ಸಂಪದ’ವನ್ನು ಏರ್ಪಡಿಸಿತ್ತು.
ಕಾರ್ಯಕ್ರಮವನ್ನು ಕರ್ನಾಟಕ ಕಲಾಶ್ರೀ ಪುರಸ್ಕೃತ ಶಿವರಾಜ ಶಾಸ್ತ್ರೀಗಳು ಉದ್ಘಾಟಿಸಿ, ಸಂಗೀತ ಒಂದು ತಪಸಸಿದ್ದಂತೆ. ಈ ತಪಸ್ಸನ್ನು ಮಾಡಿದವರು ಸಂಗೀತ ಒಲಿದ ಮೇಲೆ ಸಂಗೀತದಿಂದ ತಾವು ಬೆಳೆದು ಸಂಗೀತವನ್ನು ಪ್ರಸರಿಸರಲು ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಂತೇಶ ಬಂಡರಗಲ್ಲ ಅವರು, ಶಾಲೆಗಳಲ್ಲಿ ಈ ರೀತಿಯ ಕಲಾವಿದರನ್ನು ಒಟ್ಟುಗೂಡಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸುವುದು ಸ್ವಾಗತಾರ್ಹ. ವಿದ್ಯಾರ್ಥಿಗಳು ಇಂಥಹಾ ಕಾರ್ಯಕ್ರಮಗಳಿಂದ ಸ್ಫೂರ್ತಿ ಪಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಾರುತಿ ಬಿನ್ನಾಳ, ಆರ್.ಜಿ. ಅಂಬಿಗೇರ, ಚಿದಾನಂದಪ್ಪ, ಕವಿತಾ ಬಂಡರಗಲ್ಲ, ಮುರ್ತುಜ ಖಾದರಿ, ಬಸವರಾಜ ಗುರಿಕಾರ ವೇದಿಕೆಯಲ್ಲಿದ್ದರು.
ವಿಜಯಲಕ್ಷ್ಮಿ ನಾಗರಾಜ ಅವರಿಂದ ಸುಗಮ ಸಂಗೀತ, ಕೀರ್ತಿ ಮೇಟಿ ಅವರಿಂದ ಭಕ್ತಿಗೀತೆಗಳು, ಆರತಿ ಮೇಟಿ ಅವರಿಂದ ವಚನ ಸಂಗೀತ, ಅಲ್ಲಾಭಕ್ಷಿ ವಾಲಿಕಾರ ಅವರಿಂದ ಜಾನಪದ ಸಂಗೀತ, ನಾಗರಾಜ ಶ್ಯಾವಿ ಅವರಿಂದ ಬಾನ್ಸೂರಿ ವಾದನ ಸೊಗಸಾಗಿ ಮೂಡಿದವು. ವಾದ್ಯ ವೃಂದದಲ್ಲಿ ರಾಮಚಂದ್ರಪ್ಪ ಉಪ್ಪಾರ, ಮಾರುತಿ ಬಿನ್ನಾಳ ಸಾಥ್ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್