ಚೀನಾ ವಿಜಯ ದಿವಸ್ : ಅತಿದೊಡ್ಡ ಮಿಲಿಟರಿ ಪ್ರದರ್ಶನ
ಬೀಜಿಂಗ್, 03 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಎರಡನೇ ಮಹಾಯುದ್ಧದಲ್ಲಿ ಜಪಾನಿನ ಆಕ್ರಮಣದ ವಿರುದ್ಧದ ವಿಜಯದ 80ನೇ ವಾರ್ಷಿಕೋತ್ಸವವನ್ನು ಸ್ಮರಿಸಿ ಬುಧವಾರ ಟಿಯಾನನ್‌ಮೆನ್ ಚೌಕದಲ್ಲಿ ಚೀನಾದ ವಿಜಯ ದಿನದ ಮೆರವಣಿಗೆ ವೈಭವದಿಂದ ನಡೆಯಿತು. ಈ ಸಂದರ್ಭದಲ್ಲಿ ಚೀನಾ ಇದುವರೆಗಿನ ತನ್ನ ಅತಿದೊಡ್ಡ ಸೈನಿಕ ಮೆರ
ಚೀನಾ ವಿಜಯ ದಿವಸ್ : ಅತಿದೊಡ್ಡ ಮಿಲಿಟರಿ ಪ್ರದರ್ಶನ


ಬೀಜಿಂಗ್, 03 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಎರಡನೇ ಮಹಾಯುದ್ಧದಲ್ಲಿ ಜಪಾನಿನ ಆಕ್ರಮಣದ ವಿರುದ್ಧದ ವಿಜಯದ 80ನೇ ವಾರ್ಷಿಕೋತ್ಸವವನ್ನು ಸ್ಮರಿಸಿ ಬುಧವಾರ ಟಿಯಾನನ್‌ಮೆನ್ ಚೌಕದಲ್ಲಿ ಚೀನಾದ ವಿಜಯ ದಿನದ ಮೆರವಣಿಗೆ ವೈಭವದಿಂದ ನಡೆಯಿತು.

ಈ ಸಂದರ್ಭದಲ್ಲಿ ಚೀನಾ ಇದುವರೆಗಿನ ತನ್ನ ಅತಿದೊಡ್ಡ ಸೈನಿಕ ಮೆರವಣಿಗೆ ನಡೆಸಿ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಜಗತ್ತಿಗೆ ಪರಿಚಯಿಸಿತು.

ಯುದ್ಧ ವಿಮಾನಗಳು, ಕ್ಷಿಪಣಿಗಳು, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆ, ವಾಯು ರಕ್ಷಣಾ ಸಾಧನಗಳು, ಟ್ಯಾಂಕ್‌ಗಳು ಹಾಗೂ ಶಸ್ತ್ರಸಜ್ಜಿತ ವಾಹನಗಳನ್ನು ಪ್ರದರ್ಶಿಸಲಾಯಿತು.

J-20 ಹಾಗೂ J-35 ಯುದ್ಧವಿಮಾನಗಳು, DF-31AG ಮತ್ತು DF-41 ಅಂತರಖಂಡೀಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು, DF-ZF ಹೈಪರ್ಸಾನಿಕ್ ಕ್ಷಿಪಣಿ, ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು,10,000 ಕ್ಕೂ ಹೆಚ್ಚು ಸೈನಿಕರ ಭವ್ಯ ಮೆರವಣಿಗೆ ನಡೆಯಿತು.

ಈ ಇತಿಹಾಸಾತ್ಮಕ ಕ್ಷಣಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್, ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ, ಜೊತೆಗೆ ಮಲೇಷ್ಯಾ, ಮ್ಯಾನ್ಮಾರ್, ಮಂಗೋಲಿಯಾ, ಇಂಡೋನೇಷ್ಯಾ, ಪಾಕಿಸ್ತಾನ, ನೇಪಾಳ, ಮಾಲ್ಡೀವ್ಸ್ ಸೇರಿದಂತೆ 26 ದೇಶಗಳ ಉನ್ನತ ನಾಯಕರು ಸಾಕ್ಷಿಯಾದರು.

ವಿಜಯ್ ದಿವಸ್ ಉದ್ದೇಶಿಸಿ ಮಾತನಾಡಿದ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು, ಚೀನಾ ಮುಂದುವರಿಯುವುದನ್ನು ತಡೆಯಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande