ವಿಜಯಪುರ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಡೋಣಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಸವಾರರು ಪ್ರಕರಣದಲ್ಲಿ ಓರ್ವನ ಬಗ್ಗೆ ಇನ್ನು ಮಾಹಿತಿ ಪತ್ತೆಯಾಗಿಲ್ಲ.
ವಿಜಯಪುರ ಜಿಲ್ಲೆಯ
ತಾಳಿಕೋಟೆ ಪಟ್ಟಣದ ಹೊರ ಭಾಗದಲ್ಲಿ ಜಲಾವೃತವಾಗಿದ್ದ ಡೋಣಿ ಸೇತುವೆ ಮೇಲೆ ಕಳೆದ ಸಪ್ಟೆಂಬರ್ 24 ರಂದು ಬೈಕ್ ಸವಾರರು ಕೊಚ್ಚಿಕೊಂಡು ಹೋಗಿದ್ದರು.
ತಾಳಿಕೋಟೆ ತಾಲೂಕಿನ ವಡವಡಗಿ ಗ್ರಾಮದ ಮಹಾಂತೇಶ ಹಾಗೂ ಸಂತೋಷ ಕೊಚ್ಚಿ ಹೋಗಿದ್ದರು. ಜಲಾವೃತವಾಗಿದ್ದ ಸೇತುವೆಯನ್ನು ಬೈಕ್ ನಲ್ಲಿ ದಾಟಲು ಹೋಗಿ ಈ ಅವಘಡ ಸಂಭವಿಸಿತ್ತು.
ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಿಯರು ಮಹಾಂತೇಶನನ್ನು ರಕ್ಷಣೆ ಮಾಡಿದ್ದರು. ಆದ್ರೇ, ಸಂತೋಷಗಾಗಿ ಶೋಧ ನಡೆಸಿದ್ದರು. ಘಟನೆ ನಡೆದು ಮೂರು ದಿನವಾದರೂ ಸಂತೋಷ ಹಡಪದ ಬಗ್ಗೆ ಸುಳಿವು ಸಿಕ್ಕಿಲ್ಲ.
ನದಿ ತಟದಲ್ಲೇ ಕುಟುಂಬದವರು ಸಂತೋಷಕ್ಕಾಗಿ ಕಾಯುತ್ತಿದ್ದಾರೆ. ಅಲ್ಲದೇ, ಶೋಧ ಮಾಡಿಲ್ಲ ಯಾಕೆ ಮಾಡುತ್ತಿಲ್ಲ ಎಂದು ಕುಟುಂಬಸ್ಥರು
ಪೊಲೀಸ್ ಆಧಿಕಾರಿಗಳ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಜೊತೆ ವಾಗ್ವಾದ ಮಾಡಿದರು.
ಸಂತೋಷಗಾಗಿ ಶೋಧ ಮಾಡುವ ಕಾರ್ಯ ನಿಲ್ಲಿಸಿಲ್ಲ. ಎಲ್ಲ ರೀತಿಯ ಪ್ರಯತ್ನ ಮಾಡುತ್ತಿರುವುದಾಗಿ ಕುಟುಂಬಸ್ಥರಿಗೆ ಅಧಿಕಾರಿಗಳು ಸಮಾಧಾನ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande