ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು, ತನಿಖೆ ಕೈಗೊಳ್ಳಲಾಗಿದೆ ಎಸ್ಪಿ ಗೋಯಲ್
ವಿಜಯಪುರ, 26 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕಾಲೇಜು ಹಾಸ್ಟೆಲ್‌‌ನಲ್ಲಿ ಪ್ರಥಮ ಪಿಯು ಸೈನ್ಸ್ ವಿದ್ಯಾರ್ಥಿನಿ ಸಾವನ್ನಪ್ಪಿದ ಪ್ರಕರಣದಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಹೇಳಿದರು. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಹಾಸ್ಟೆಲ್‌‌ನಲ್ಲಿ ಸಾವನ್ನಪ್ಪಿದ ವಿದ
ಎಸ್ಪಿ


ವಿಜಯಪುರ, 26 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕಾಲೇಜು ಹಾಸ್ಟೆಲ್‌‌ನಲ್ಲಿ ಪ್ರಥಮ ಪಿಯು ಸೈನ್ಸ್ ವಿದ್ಯಾರ್ಥಿನಿ ಸಾವನ್ನಪ್ಪಿದ ಪ್ರಕರಣದಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಹೇಳಿದರು.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಹಾಸ್ಟೆಲ್‌‌ನಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿನಿ ಸೀಮಾ ಲಮಾಣಿ ಮೂಲತಃ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಸುನಗ ತಾಂಡಾ ನಿವಾಸಿಯಾಗಿದ್ದಾರೆ. ಬಾಗಲಕೋಟೆಯ ವಿದ್ಯಾಗಿರಿಯ ಹಾಸ್ಟೆಲ್‌‌ನಲ್ಲಿ ಇದ್ದರು. ಮೂರು ದಿನದ ಹಿಂದೆ ಊರಿಗೆ ಹೋಗಿದ್ದರು. ತದನಂತರ ಅವಳ ಚಿಕ್ಕಪ್ಪ ಅವಳನ್ನು ಕರೆತಂದು ಹಾಸ್ಟೆಲ್‌‌ಗೆ ಬಿಟ್ಟಿದ್ದರು. ಹಾಸ್ಟೆಲ್‌‌ನಲ್ಲಿ ರೂಮ್ನಲ್ಲಿ ಒಬ್ಬಳೇ ಇದ್ದಾಗ ಟಾವೆಲ್‌‌ನಿಂದ ಕಿಡಕಿ‌ ಮೇಲಿನ ಗ್ರಿಲ್‌‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನ ನಡೆಸಿದ್ದಳು. ಇದನ್ನು ಕಂಡ ವಿದ್ಯಾರ್ಥಿನಿಯರು ಹಾಗೂ ಹಾಸ್ಟೆಲ್ ವಾರ್ಡ್‌ನ ತಕ್ಷಣ ಟಾವೆಲ್ ಬಿಚ್ಚಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾಳೆ ಎಂದರು.

ಅವಳ ತಾಯಿ ಮೂಲಕ ದೂರು ದಾಖಲಿಸಿಕೊಂಡಿದ್ದೇವೆ. ಇದರ ಹಿಂದೆ ಏನಿದೆ ಅಥವಾ ಯಾರದ್ದಾದರೂ ಒತ್ತಡ ಇದೆಯಾ? ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ತನಿಖೆ ಮಾಡುತ್ತಿದ್ದೇವೆ. ಸದ್ಯದ ಮಟ್ಟಿಗೆ ಯಾವುದೇ ಮಾಹಿತಿ ಗೊತ್ತಾಗಿಲ್ಲ. ಹಾಸ್ಟೆಲ್ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಕೂಡ ಪರಿಶೀಲನೆ ಮಾಡುತ್ತಿದ್ದೇವೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande