ವಿಜಯಪುರ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭೀಕರ ಮಳೆ ಹಾಗೂ ಪ್ರವಾಹಕ್ಕೆ ರಾಜ್ಯದ ಜನರು, ರೈತರು ತತ್ತರಿಸಿದೆ. ಆದರೆ ಸರ್ಕಾರದ ಮಂತ್ರಿಗಳು ಹೆಲಿಕಾಪ್ಟರ್ ಖರೀದಿಸಲು ಚಿಂತನೆಯಲ್ಲಿ ಮಗ್ನರಾಗಿದ್ದಾರೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯಿಂದ ಭೀಮಾ, ಕೃಷ್ಣ ನದಿಯಿಂದ ಪ್ರವಾಹ ಉಂಟಾಗಿದೆ. ಅಲ್ಲದೇ ನಿರಂತರ ಮನೆ ಜನಜೀವನ ನಾಶ ಆಗಿದೆ. ರೈತ ಬೆಳೆ ಬೆಳೆನಾಶ ಆಗಿದೆ. ಆದರೂ ಯಾವುದೇ ಒಬ್ಬ ಮಂತ್ರಿಗಳ ಜನರ ಬಳಿ ಹೋಗಿಲ್ಲ. ಅವರು ಹೆಲಿಕಾಪ್ಟರ್ ಖರೀದಿ ಮಗ್ನರಾಗಿದ್ದಾರೆ ಎಂದು ದೂರಿದರು.
ಇಂದು ರೈತರ ಬೆಳೆದ ಬೆಳೆ ಸಂಪೂರ್ಣ ನಾಶವಾಗಿವೆ. ಕಳೆದ ವರ್ಷ ಜಿಲ್ಲೆಯಲ್ಲಿ ಕಳಪೆ ಬೀಜ ನೀಡಿದರಿಂದ ರೈತರು ಸಂಕಷ್ಟ ಎದುರಿಸಿದರೂ ಕೃಷಿ ಇಲಾಖೆಯವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ಬೆಳೆ ಹಾನಿ ಆದರೂ ರೈತರ ಕ್ಷೇತ್ರಕ್ಕೆ ಯಾವ ಒಬ್ಬ ಮಂತ್ರಿ ಅವರ ಬಳಿ ಹೊಗಿಲ್ಲ. ಅವರ ನೋವು ಆಲಿಸಿಲ್ಲ ಎಂದು ಹೇಳಿದರು.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಮಳೆಯಿಂದ ಹಾನಿಯಾದವರಿಗೆ ತಕ್ಷಣ ಅವರಿಗೆ ಹತ್ತು ಸಾವಿರಾರು ನೀಡುವ ವ್ಯವಸ್ಥೆ ಇತ್ತು. ಪ್ರವಾಹದಿಂದ ರೈತರು, ಜನರು ಮಳೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರೂ ಸೌಜನ್ಯಕ್ಕೆ ಅವರ ಬಳಿ ಹೋಗಿ ಕೇಳುವರು ಇಲ್ಲ ಎಂದು ಹೇಳಿದರು.
ಪ್ರವಾಹದ ಮಹಾಪೂರವೇ ಬಂದೆ ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಜನರ, ರೈತರ ಬಳಿ ಹೋಗುತ್ತಿಲ್ಲ. ಅವರ ಒಂದು ವರ್ಷದಿಂದ ಕೆ.ಡಿ.ಪಿ ಸಭೆ ನಡೆಸುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಪರ ಕಾರ್ಯ ನಡೆಯುತ್ತಿಲ್ಲ ಎಂದು ದೂರಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಜಾತಿ ಸಮೀಕ್ಷೆ ನಡೆಸುತ್ತಿರುವ ಯಾವ ಪುರುಷಾರ್ಥಕ್ಕೆ. ಆ ನಷ್ಟ ಭರಿಸಿ ಜನರಿಗೆ ನೆರವಾಗಬೇಕಿದ್ದ ಸರ್ಕಾರ, ಸಮೀಕ್ಷೆ ಮೂಲಕ ವಿವಿಧ ಜಾತಿಗಳ ಮಧ್ಯೆ ಸಂಘರ್ಷ ಮಾಡುವ ಬೆಂಕಿಕೆಲಸ ಮಾಡುತ್ತಿದೆ ಎಂದು ದೂರಿದರು.
ಈ ಸಮೀಕ್ಷೆಗೆ ರೂಪಿಸಿದ ಪಟ್ಟಿಯಲ್ಲಿ 210 ಹೊಸ ಜಾತಿ ಸೃಷ್ಟಿಸಲಾಗಿದೆ..ತಮ್ಮ ಮುಖ್ಯಮಂತ್ರಿ ಸ್ಥಾನದ ಕುರ್ಚಿ ಅಲುಗಾಡಬಾರದೆಂದು ಹೊಸ ಗಿಮಿಕ್ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಮುಂದಿನ ವರ್ಷದಲ್ಲಿ ಕೇಂದ್ರ ಸರ್ಕಾರವೂ ಜಾತಿ ಜನಗಣತಿ ಮಾಡುವುದಾಗಿ ತಿಳಿಸಿದೆ. ಆದರೆ ಇದು ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದಾರೆ. ಲಕ್ಷಾಂತರ ರೂ. ಹಣವನ್ನು ಸಮೀಕ್ಷೆ ಮಾಡಿ ಹಾಳು ಮಾಡಿದ್ದಾರೆ. ಇನ್ನೂ ಶಿಕ್ಷಕರಿಗೆ ಪೂರ್ವ ತಯಾರಿ ನೀಡಿಲ್ಲ. ಅವರಿಗೆ ಸರಿಯಾಗಿ ಕಾರ್ಯ ಮಾಡುತ್ತಿಲ್ಲ ಎಂದು ಆರೋಪಿಸಿದರು.
೯೦ ದಿನ ಅಭಿಯಾನ.
ಪ್ರಧಾನಿ ನರೇಂದ್ರ ಮೋದಿ ಜನ್ಮದಿನ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಗಾಂಧಿ ಜಯಂತಿ ಅಂಗವಾಗಿ ಪಕ್ಷವು ೯೦ ದಿನ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ಕಾರ್ಯಾಗಾರವನ್ನು ನಡೆಸಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ದೇಶದ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಂಡು ದೇಶವನ್ನು ಕಟ್ಟುವ ಅವಶ್ಯಕತೆಯಿದೆ. ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಆತ್ಮನಿರ್ಭರ ಭಾರತ ಎನ್ನುವುದು ಸೂಕ್ತ ಪರಿಕಲ್ಪನೆಯಾಗಿದೆ. ಸ್ವದೇಶೀ ಕಲ್ಪನೆಯಿಂದ ಮಹಿಳೆ, ಯುವಕರ, ವ್ಯಾಪರಿಸ್ಥರು, ಉದ್ದೇಮಿಗಳಿಗೆ ಜಾಗೃತಿಗಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸೋಮನಗೌಡ ಪಾಟೀಲ ಶಾಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ಸೇರಿದಂತೆ ಮುಂತಾದವರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande