ನವದೆಹಲಿ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರ ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ, 7.5 ಮಿಲಿಯನ್ (75 ಲಕ್ಷ) ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ ₹10,000ರಂತೆ ಒಟ್ಟು ₹7,500 ಕೋಟಿ ನೇರವಾಗಿ ವರ್ಗಾಯಿಸಲಾಗುವುದು.
ಯೋಜನೆಯಡಿ, ಪ್ರತಿಯೊಂದು ಮನೆಯಿಂದ ಒಬ್ಬ ಮಹಿಳೆಗೆ ಆರ್ಥಿಕ ನೆರವು ಒದಗಿಸಲಾಗುವುದು. ನಂತರದ ಹಂತಗಳಲ್ಲಿ ₹2 ಲಕ್ಷದವರೆಗೆ ಹೆಚ್ಚುವರಿ ನೆರವು ಲಭ್ಯವಾಗಲಿದೆ. ಮಹಿಳೆಯರು ಕೃಷಿ, ಪಶುಸಂಗೋಪನೆ, ಕರಕುಶಲ, ಹೊಲಿಗೆ-ಹೆಣಿಗೆ ಸೇರಿದಂತೆ ಸ್ವ-ಉದ್ಯೋಗ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬಹುದು.
ಸ್ವ-ಸಹಾಯ ಗುಂಪುಗಳ ಬೆಂಬಲ, ತರಬೇತಿ, ಗ್ರಾಮೀಣ ಹಾತ್-ಬಜಾರ್ ಅಭಿವೃದ್ಧಿ ಮೊದಲಾದ ಕ್ರಮಗಳ ಮೂಲಕ ಮಹಿಳಾ ಸಬಲೀಕರಣ, ಆರ್ಥಿಕ ಸ್ವಾವಲಂಬನೆ ಹಾಗೂ ಜೀವನೋಪಾಯ ಉತ್ತೇಜನ ಈ ಯೋಜನೆಯ ಉದ್ದೇಶವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa