ಬಿಹಾರದಲ್ಲಿ ಮುಖ್ಯಮಂತ್ರಿಗಳ ಮಹಿಳಾ ಉದ್ಯೋಗ ಯೋಜನೆ ಉದ್ಘಾಟನೆ
ನವದೆಹಲಿ, 26 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಬಿಹಾರದ ಮುಖ್ಯಮಂತ್ರಿಗಳ ಮಹಿಳಾ ಉದ್ಯೋಗ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯಡಿ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ ₹10,000 ನೇರ ವರ್ಗಾವಣೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಮಹಿಳೆಯರ ಆರ್ಥಿಕ,
Pm


ನವದೆಹಲಿ, 26 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಬಿಹಾರದ ಮುಖ್ಯಮಂತ್ರಿಗಳ ಮಹಿಳಾ ಉದ್ಯೋಗ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯಡಿ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ ₹10,000 ನೇರ ವರ್ಗಾವಣೆ ಮಾಡಲಾಗಿದೆ.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಬಲೀಕರಣವೇ ಸರ್ಕಾರದ ಮುಖ್ಯ ಗುರಿ. ಮಹಿಳೆಯರು ಉದ್ಯೋಗಿ ಅಥವಾ ಸ್ವಯಂ ಉದ್ಯೋಗಿಯಾದಾಗ, ಅವರ ಕನಸುಗಳಿಗೆ ರೆಕ್ಕೆಗಳು ಬರುತ್ತವೆ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಎಂದರು.

ಪ್ರಧಾನಿ ಮೋದಿ ಉಜ್ವಲ ಯೋಜನೆ, ಬ್ಯಾಂಕ್ ದೀದಿ ಅಭಿಯಾನ ಮತ್ತು ಇತರ ಕೇಂದ್ರ ಯೋಜನೆಗಳನ್ನು ಉಲ್ಲೇಖಿಸಿ, ಹಳ್ಳಿಗಳಲ್ಲಿ ಮಹಿಳೆಯರ ಜೀವನ ಸುಗಮಗೊಳ್ಳುವಂತೆ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು. ಅವರು ಜಿಎಸ್‌ಟಿ ದರ ಕಡಿತದಿಂದ ಮನೆಯ ಖರ್ಚು ಕಡಿಮೆಯಾಗುವುದರ ಜೊತೆಗೆ ವ್ಯಾಪಾರಕ್ಕೆ ಉತ್ತೇಜನ ಸಿಗಲಿದೆ ಎಂದರು.

ನವರಾತ್ರಿ ಶುಭ ದಿನಗಳಲ್ಲಿ ಮಹಿಳಾ ಶಕ್ತಿ ದೇಶದ ಶಕ್ತಿ ಎಂದು ಉಲ್ಲೇಖಿಸಿ, ಬಿಹಾರದ ಮಹಿಳೆಯರು ಕಠಿಣ ಪರಿಸ್ಥಿತಿಗಳಿಂದ ಹೊರಬಂದು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande