ವಿಜಯಪುರ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅನ್ಯಜಾತಿಯವರಿಗೆ ಪರಿಶಿಷ್ಟರ ಪ್ರಮಾಣ ಪತ್ರವನ್ನು ನೀಡುವುದನ್ನು ನಿಲ್ಲಿಸಬೇಕು. ಅಲ್ಲದೇ, ಅನ್ಯಜಾತಿಯನ್ನು ಸೇರ್ಪಡೆ ಮಾಡಬಾರದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕಾ ಘಟಕದಿಂದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ತಾಲೂಕಾ ಅಧ್ಯಕ್ಷ ರವಿ ನಾಯಕೋಡಿ ಮಾತನಾಡಿ, ಕಳೆದ ಏಳು ದಶಕಗಳಿಂದ ಸಮಾಜದ ಮೇಲೆ ವಂಚನೆ, ಶೋಷಣೆ, ದಬ್ಬಾಳಿಕೆ ನಿರಂತರ ನಡೆಯುತ್ತಿದೆ. ನಮ್ಮ ಹಕ್ಕನ್ನು ಪಡೆದುಕೊಳ್ಳುವುದಕ್ಕಾಗಿ ಹೋರಾಟಕ್ಕಿಳಿಯಬೇಕಾಗಿ ಬಂದಿರುವುದು ವಿಪರ್ಯಾಸ.
ಬೇಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೋಲಿ ಇತರೆ ಪಂಗಡದವರು ಪ್ರವರ್ಗರಲ್ಲಿ ಬರುತ್ತಿದ್ದು, ಅವರಿಗೆಲ್ಲ ಎಸ್‌ಟಿ ಪ್ರಮಾಣ ಪತ್ರವನ್ನು ನೀಡುವುದನ್ನು ನಿಲ್ಲಿಸಬೇಕು. ನಕಲಿ ಪ್ರಮಾಣ ಪತ್ರ ಕೊಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ಸಮಯದಲ್ಲಿ ಶೇಖಪ್ಪ ಲಿಂಗದಳ್ಳಿ, ಪರುಶು ಬಡಿಗೇರ್, ಶ್ರೀಶೈಲ್ ಜಾಲವಾದಿ, ಪಿ ಐ ಕೋಳೂರ,ಬಸನಗೌಡ ಪಾಟೀಲ್, ಶ್ರೀಶೈಲ್ ಹೊನ್ನಳ್ಳಿ, ಕಾಶಿನಾಥ್ ಬಡಿಗೇರ್, ಸಮಾಜದ ಮುಖಂಡರು ಉಪಸಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande