ಬಳ್ಳಾರಿ : ಯುವ ಪೀಳಿಗೆಯು ಅನ್ವೇಷಣಾಸಕ್ತಿ ಬೆಳೆಸಿಕೊಳ್ಳಬೇಕು-ಡಾ.ಸವಿತಾ ಸೋನಾಲಿ
ಬಳ್ಳಾರಿ, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಯುವ ಪೀಳಿಗೆಯು ಹೊಸ ವಿಷಯ ಪ್ರಯೋಗ ಅಥವಾ ಅನ್ವೇಷಣಾ ಮಾಡುವ ಆಸಕ್ತಿ ಆಳವಡಿಸಿಕೊಳ್ಳಬೇಕು ಎಂದು ರಾವ್ ಬಹದ್ದೂರ್ ವೈ ಮಹಾಬಲೇಶ್ವರ ಇಂಜಿನಿಯರಿ0ಗ್ (ಆರ್‌ವೈಎಂಇಸಿ) ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ಸವಿತಾ ಸೊನಾಲಿ ಅವರು ತಿಳಿಸಿದ್ದಾರೆ ಕೈಗಾರಿ
ಬಳ್ಳಾರಿ : ಯುವ ಪೀಳಿಗೆಯು ಅನ್ವೇಷಣಾಸಕ್ತಿ ಬೆಳೆಸಿಕೊಳ್ಳಬೇಕು: ಡಾ.ಸವಿತಾ ಸೋನಾಲಿ


ಬಳ್ಳಾರಿ, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಯುವ ಪೀಳಿಗೆಯು ಹೊಸ ವಿಷಯ ಪ್ರಯೋಗ ಅಥವಾ ಅನ್ವೇಷಣಾ ಮಾಡುವ ಆಸಕ್ತಿ ಆಳವಡಿಸಿಕೊಳ್ಳಬೇಕು ಎಂದು ರಾವ್ ಬಹದ್ದೂರ್ ವೈ ಮಹಾಬಲೇಶ್ವರ ಇಂಜಿನಿಯರಿ0ಗ್ (ಆರ್‌ವೈಎಂಇಸಿ) ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ಸವಿತಾ ಸೊನಾಲಿ ಅವರು ತಿಳಿಸಿದ್ದಾರೆ

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ಆರ್‌ಎಎಂಪಿ ಯೋಜನೆಯಡಿ ನಗರದ ಕಂಟೋನ್‌ಮೆ0ಟ್‌ನ ಆರ್‌ವೈಎಂಇಸಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಇಂಕ್ಯುಬೇಶನ್ ಯೋಜನೆಯ ಬಗ್ಗೆ ಒಂದು ದಿನದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಆರ್‌ವೈಎಂಇಸಿ ಕಾಲೇಜು ವತಿಯಿಂದ ಒಟ್ಟು 12 ಇಂಕ್ಯೂಬೇಶನ್ ಚಟುವಟಿಕೆಗಳ ಕುರಿತು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾಲೇಜಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಗರಿಷ್ಟ 03 ಲಕ್ಷದಂತೆ ಪ್ರೋತ್ಸಾಹ ಪಡೆದುಕೊಂಡಿದೆ ಎಂದು ಎಂದು ತಿಳಿಸಿದರು.

ಈ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಭಾಗವಹಿಸಿ ಇಂಕ್ಯುಬೇಶನ್ ಸೌಲಭ್ಯಗಳು, ಯಶಸ್ಸಿನ ಕಥೆಗಳ ಬಗ್ಗೆ ಅರಿವು ಮೂಡಿಸಲಾಯಿತು.

ಕೈಗಾರಿಕೆಯಲ್ಲಿ ಯಶಸ್ವಿ ಉದ್ದಿಮೆದಾರರು ಕೆವಿಟಿ ಕೈಗಾರಿಕೆಯ ವೀರೇಂದ್ರ ಕುಮಾರ್ ಅವರು ಪಾಲ್ಗೊಂಡು ಕೈಗಾರಿಕೆ ಪ್ರಾರಂಭಿಸುವ ಕುರಿತು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳು, ಉದ್ದಿಮೆದಾರರೊಂದಿಗೆ ಮಾಹಿತಿ ಹಂಚಿಕೊ0ಡರು.

ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಸೋಮಶೇಖರ್.ಬಿ., ಆರ್‌ವೈಎಂಇಸಿ ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಕೋರಿ ನಾಗರಾಜ, ಅಡ್ವಕೇಟ್ ಮತ್ತು ಲೀಗಲ್ ಕೌನ್ಸಿಲ್ ಸುಜಾತ, ಹೆಡ್ ಆಫ್ ಪೆಟೆಂಟ್ ಸೆಲ್‌ನ ಶರತ್ ಕುಮಾರ್, ಪಿಜಿ ಕೋ-ಆರ್‌ಡಿನೇಟರ್ ಚಿಟ್ರಿಕಿ ತೋಟಪ್ಪ, ಇಡಿಸಿ ಕೋ-ಆರ್‌ಡಿನೇಟರ್ ಡಾ.ಆರ್.ಎಚ್.ಎಂ.ಸೋಮನಾಥ ಸ್ವಾಮಿ, ಇಡಿಸಿ ಕೋ-ಆರ್ಡಿನೇಟರ್ ಬೆರಿಗಿ ವೀರೇಶ್ ಸೇರಿದಂತೆ ಉದ್ದಿಮೆದಾರರು, ಆರ್‌ವೈಎಂಇಸಿ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande