ಗದಗ, 25 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸರಕಾರ ದಸರಾ ರಜೆ ನೀಡಿದ್ದರೂ ಸಹ ಕಾನೂನು ಬಾಹೀರವಾಗಿ ವಿಶೇಷ ತರಗತಿ,ಪರೀಕ್ಷೆ ನಡೆಸುತ್ತಿದ್ದ ಲೋಯಲಾ ಕಾನ್ವೇಂಟ,ಸೇಂಟ್ ಜೋನ್ಸ ಶಾಲೆಗಳ ಮೇಲೆ ಶ್ರೀರಾಮ ಸೇನೆಯ ನೂರಾರು ಕಾರ್ಯಕರ್ತರು ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಹಾಗೂ ಶ್ರೀರಾಮ ಸೇನೆಯ ಕಾರ್ಯಕರ್ತರಿಗೂ ತೀವ್ರ ವಾಗ್ವಾದವಾಯಿತು. ಉದ್ರಿಕ್ತ ಶ್ರೀರಾಮ ಸೇನೆ ಕಾರ್ಯಕರ್ತರ ಕೋಪವನ್ನು ಶಮನಗೋಳಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
ಶ್ರೀರಾಮ ಸೇನೆಯ ಕಾರ್ಯಕರ್ತರು ಲೋಯಲಾ ಕಾನ್ವೆಂಟ್, ಸೇಂಟ್ ಜೋನ್ಸ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಹಾಕಿದರು.
ಸ್ಥಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ಕರೆಯಿಸುವಂತೆ ಪಟ್ಟುಹಿಡಿದರು. ಆಗ ಪೊಲೀಸರು ಮಧ್ಯ ಪ್ರವೇಶಿಸಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್.ಶೆಟ್ಟೆಪ್ಪನವರನ್ನು ಲೋಯಲಾ ಕಾನ್ವೇಂಟ್‍ಗೆ ಕರೆಯಿಸಿದರು.ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಸಮಾಧಾನಪಡಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಮಹೇಶ ರೋಖಡೆ ರಾಜ್ಯ ಸರಕಾರ ರಾಜ್ಯದಲ್ಲಿನ ಎಲ್ಲ ಶಾಲೆ,ಕಾಲೇಜುಗಳಿಗೆ ದಿ.20ರಿಂದ ಅಕ್ಟೋಬರ 7 ರವರೆಗೆ ರಜೆ ಘೋಷಿಸಿzಜ್ಯಾದರೂ ಈ ಕ್ರಿಶ್ಚೀಯನ್ ಶಾಲೆಗಳು ಮುದ್ದಾಂ ಶಾಲೆಯಲ್ಲಿ ಅಧ್ಯಯನ ಮಾಡುವ ಹಿಂದೂ ವಿದ್ಯಾರ್ಥಿಗಳಿಗೆ ತೊಂದರೆ ನೀಡಲು ವಿಶೇಷ ತರಗತಿ,ಪರೀಕ್ಷೆಗಳನ್ನು ನಡೆಸುತ್ತಿವೆ. ಇದು ಹಿಂದೂಗಳ ಧಾರ್ಮಿಕ ಭಾವನೆಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆಯೆಂದು ಆರೋಪಿಸಿದರು.
ಈ ಕ್ರಿಶ್ಚೀಯನ್ ಶಾಲೆ,ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳ ಧಾರ್ಮಿಕ ಸಂಕೇತಗಳನ್ನು ಕಸಿದುಕೊಂಡು ಕಸದ ಬುಟ್ಟಿಗೆ ಹಾಕುವ ಮೂಲಕ ಅವಮಾನಿಸಲಾಗುತ್ತಿದೆ. ಇದರಿಂದಾಗಿ ಅನೇಕ ಹಿಂದೂ ವಿದ್ಯಾರ್ಥಿ, ವಿದ್ಯಾರ್ಥಿ ನಿಯರು ಈ ಶಾಲೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.ರಾಜ್ಯ ಸರಕಾರ ಕೂಡಲೇ ಇಂತಹ ಶಿಕ್ಷಣ ಸಂಸ್ಥೆಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಪ್ರತಿವರ್ಷಹಿಂದೂ ಹಬ್ಬದಾಚರಣೆಯ ಸಂದರ್ಭದಲ್ಲಿ ಮುದ್ದಾಂ ಪರೀಕ್ಷೆ,ವಿಶೇಷ ತರಗತಿ ನೆಪದಲ್ಲಿ ಹಿಂದೂಗಳ ಭಾವನೆಯನ್ನು ಕೆದಕುತ್ತಿದೆ.ಈ ಶಿಕ್ಷಣ ಸಂಸ್ಥೆಗಳು ಇದೇ ಮನೋಭಾವನೆಯನ್ನು ಮುಂದುವರೆಸಿದಲ್ಲಿ ಇದರ ಪರಿಣಾಮ ನೆಟ್ಟಗಾಗುವದಿಲ್ಲವೆಂದು ಎಚ್ಚರಿಸಿದರು.
ಲೋಯಲಾ ಕಾನ್ವೆಂಟ್,ಸೇಂಟ್ ಜೋನ್ಸ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ,ರಾಷ್ಟ್ರಪಿತ ಮಹಾತ್ಮಾಗಾಂಧಿ, ಮಹಾಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಭಾವಿಚಿತ್ರಗಳನ್ನು ಅಳವಡಿಸದ್ದಕ್ಕಾಗಿ ಶ್ರೀರಾಮ ಸೇನೆಯ ಕಾರ್ಯಕರ್ತರು ತೀವ್ರ ಅಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ್ದ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್.ಶೆಟ್ಟೇಪ್ಪನವರ ಸದರಿ ಶಾಲೆಗಳಿಗೆ ಸರಕಾರಿ ಆದೇಶ ಉಲ್ಲಂಘಿಸಿದ್ದಕ್ಕಾಗಿ ನೊಟೀಸ್ ಜಾರಿ ಮಾಡುವದಾಗಿ ಹೇಳಿ ಶ್ರೀರಾಮ ಸೇನೆಯ ಕಾರ್ಯಕರ್ತರ ಅಕ್ರೊಶವನ್ನು ಶಮನಗೋಳಿಸಿದರು.
ಶಾಲೆಗೆ ಆಗಮಿಸುವ ಹಿಂದೂ ವಿದ್ಯಾರ್ಥಿನಿಯರ ಕೈಯಲ್ಲಿನ ಬಳೆಗಳನ್ನು ತೆಗೆಯಿಸಲಾಗುತ್ತಿದೆ. ಪರಿಣಾಮವಾಗಿ ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ಹಿಂದೂ ಆಚರಣೆಗಳು,ಸಂಪ್ರದಾಯಗಳ ಬಗ್ಗೆ ಅನ್ಯಭಾವನೆಯನ್ನು ಮೂಡಿಸುವ ಮೂಲಕ ಹಿಂದೂ ವಿದ್ಯಾರ್ಥಿನಿಯರನ್ನು ಮತಾಂತರಕ್ಕೆ ಪ್ರಯತ್ನಿಸಲಾಗುತ್ತಿದೆಯೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಹಿರಿಯ ಕಾರ್ಯಕರ್ತ ಸತೀಶ ಕುಂಬಾರ,ಅಶೋಕ ಭಜಂತ್ರಿ,ಸಂಜು ಚಟ್ಟಿ,ಮಹೇಶ ಹೊಸೂರು,ಭರತ್ ಲದ್ದಿ,ಕೃಷ್ಣ ಚುರ್ಚಪ್ಪನವರ,ಮಂಜುನಾಥ ಗುಡಿಮನಿ,ಹುಲಿಗೆಪ್ಪ ವಾಲ್ಮೀಕಿ,ಅನೀಲ ಮುಳ್ಳಾಳ,ಈರಪ್ಪ ಹೆಬಸೂರ,ಶಿವು ದಂಡಿನ,ಈರಪ್ಪ ವಾಲ್ಮೀಕಿ,ಶರಣಪ್ಪ ಲಕ್ಕುಂಡಿ,ವಿನಾಯಕ ಬೆಟಗೇರಿ,ಬಸವರಾಜ ಹುಲಕೋಟಿ,ದಲಿತ ಮಿತ್ರ ಮೇಳದ ಅಧ್ಯಕ್ಷ ಕುಮಾರ ನಡಗೇರಿ,ಉಪಾಧ್ಯಕ್ಷ ವೆಂಕಟೇಶ ದೊಡ್ಡಮನಿ,ರಾಮು ಗೌಡರ ಮುಂತಾದವರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP