ರಾಜ್ಯ ಮಟ್ಟದ ಅಣಕು ಸಂಸತ್ತು ಸ್ಪರ್ಧೆಗೆ ಆಯ್ಕೆ
ಗದಗ, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಗದ್ಗುರು ತೋಂಟದಾರ್ಯ ಪದವಿ ಪೂರ್ವ ಕಾಲೇಜ ಗದಗನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯವರು ಏರ್ಪಡಿಸಿದ ಜಿಲ್ಲಾಮಟ್ಟದ ಅಣಕು ಸಂಸತ್ತು ಸ್ಪರ್ಧೆಯಲ್ಲಿ ಎಫ್ ಬಿ ಪೂಜಾರ್ ಸರ್ಕಾರಿ ಪದವಿ ಪೂರ್ವ ಕಾಲೇಜ ಶಿರಹಟ್ಟಿಯ ಕುಮಾರಿ ಮರಿಯಮ್ಮ ರಣತೂರ ಪ್ರಥಮ ಸ್ಥಾನ ಹಾಗೂ ಪ್ರ
ಪೋಟೋ


ಗದಗ, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಗದ್ಗುರು ತೋಂಟದಾರ್ಯ ಪದವಿ ಪೂರ್ವ ಕಾಲೇಜ ಗದಗನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯವರು ಏರ್ಪಡಿಸಿದ ಜಿಲ್ಲಾಮಟ್ಟದ ಅಣಕು ಸಂಸತ್ತು ಸ್ಪರ್ಧೆಯಲ್ಲಿ ಎಫ್ ಬಿ ಪೂಜಾರ್ ಸರ್ಕಾರಿ ಪದವಿ ಪೂರ್ವ ಕಾಲೇಜ ಶಿರಹಟ್ಟಿಯ ಕುಮಾರಿ ಮರಿಯಮ್ಮ ರಣತೂರ ಪ್ರಥಮ ಸ್ಥಾನ ಹಾಗೂ ಪ್ರಿಯಾಂಕ ಮಾನೆ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸದರಿ ವಿದ್ಯಾರ್ಥಿಗಳಿಗೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಕಾಲೇಜು ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು ಹಾಗೂ ಪ್ರಾಚಾರ್ಯರಾದ ಬಿ.ಜಿ ಗಿರತಿಮಣ್ಣವರ್ ಮತ್ತು ಸಿಬ್ಬಂದಿಯವರು ಅಭಿನಂದನೆಗಳನ್ನು ಸಲ್ಲಿಸಿ ಶುಭ ಹಾರೈಸಿರುವರು. ಈ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿದ ರಾಜ್ಯಶಾಸ್ತçದ ಉಪನ್ಯಾಸಕರಾದ ಶ್ರೀಮತಿ ರಾಜೇಶ್ವರಿ ಸಂಶಿ ಅವರಿಗೂ ಅಭಿನಂದನೆ ಸಲ್ಲಿಸುತ್ತಾ ರಾಜ್ಯ ಮಟ್ಟಕ್ಕೆ ಹೆಚ್ಚಿನ ತರಬೇತಿ ನೀಡಲು ಕೋರಲಾಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande