ಶಾಲಾ ಶಿಕ್ಷಕರಿಗೆ ಶೈಕ್ಷಣಿಕ, ಜಾತಿ ಗಣತಿಯಲ್ಲಿ ಸಮಸ್ಯೆಪರಿಹಾರಕ್ಕೆ ಆಗ್ರಹ
ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಶಾಲಾ ಶಿಕ್ಷಕರಿಗೆ ಶೈಕ್ಷಣಿಕ, ಜಾತಿ ಗಣತಿಯಿಂದ ಸಮಸ್ಯೆ ಆಗುತ್ತಿದ್ದು, ಸರಿಯಾದ ಆ್ಯಪ್ ಇಲ್ಲ, ಸರ್ವರ ಸಮಸ್ಯೆ ಆಗುತ್ತಿದೆ. ಇದನ್ನು ಪರಿಹರಿಸಬೇಕು. ಅಂದಾಗ ಮಾತ್ರ ಸಮೀಕ್ಷೆಗೆ ಹೋಗುತ್ತೇವೆ ಎಂದು ಜಿಲ್ಲಾಡಳಿತ ಮುಂದೆ ಕರ್ನಾಟಕ ರಾಜ್ಯ ಶಾಲಾ ಶಿಕ್ಷಕ
ಸಮೀಕ್ಷೆ


ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಶಾಲಾ ಶಿಕ್ಷಕರಿಗೆ ಶೈಕ್ಷಣಿಕ, ಜಾತಿ ಗಣತಿಯಿಂದ ಸಮಸ್ಯೆ ಆಗುತ್ತಿದ್ದು, ಸರಿಯಾದ ಆ್ಯಪ್ ಇಲ್ಲ, ಸರ್ವರ ಸಮಸ್ಯೆ ಆಗುತ್ತಿದೆ. ಇದನ್ನು ಪರಿಹರಿಸಬೇಕು. ಅಂದಾಗ ಮಾತ್ರ ಸಮೀಕ್ಷೆಗೆ ಹೋಗುತ್ತೇವೆ ಎಂದು ಜಿಲ್ಲಾಡಳಿತ ಮುಂದೆ ಕರ್ನಾಟಕ ರಾಜ್ಯ ಶಾಲಾ ಶಿಕ್ಷಕರ ಸಂಘ ತಾಲೂಕ ಘಟಕದಿಂದ ಪ್ರತಿಭಟನೆ ಮಾಡಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕ ಘಟಕ ಅಧ್ಯಕ್ಷ ವೈ.ಡಿ.ಕಿರಸೂರು ಮಾತನಾಡಿ, 22 ಸಪ್ಟಂಬರ್, 2025ರಿಂದ ಪ್ರಾರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಿದ್ದು, ಇಲ್ಲಿಯವರೆಗೂ ಕೂಡಾ ಸುಲಭವಾಗಿ ಸಮೀಕ್ಷಾ ಕಾರ್ಯವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಕಾರ್ಯವನ್ನು ಪರಿಪೂರ್ಣವಾಗಿ ಪೂರೈಸಲು ಹಲವಾರು ಸಮಸ್ಯೆಗಳ ಮಧ್ಯೆ ಶಿಕ್ಷಕರು ಹರಸಾಹಸ ಪಡುತ್ತಿದ್ದಾರೆಂದರು.

ಬಾಗಲಕೋಟೆ ತಾಲೂಕಿನ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ APP ಪದೇ ಪದೇ ಅಪ್ಲೇಟ್ ಆಗಲು ಬೇರೆ ಬೇರೆ APK ಫೈಲ್ ಡೌಪ್ಲೋಡ್ ಮಾಡಿಕೊಳ್ಳಲು ತಿಳಿಸುತ್ತಿದೆ. ಜಿಯೋ ಟ್ಯಾಗ್ ಜೋಡಣೆ ಮಾಡಿರುವ ಯು.ಎಚ್.ಆಯ್.ಡಿ ಅಂಟಿಸಿದ್ದು, ಅವುಗಳ ಸರಿಯಾದ LOCATION ಗೊತ್ತಾಗದೆ ಶಿಕ್ಷಕರು ಮನೆ ಹುಡುಕಲು ಸಾಧ್ಯವಾಗುತ್ತಿಲ್ಲ, ಕಾರಣ ಕಳೆದ ಒಳಮೀಸಲಾತಿ ಸಮೀಕ್ಷೆಯಂತೆ ಶಿಕ್ಷಕರಿಗೆ ನಿಗದಿಪಡಿಸಿದ ಮನೆಗಳ ಸಂಪೂರ್ಣ ವಿಳಾಸದ ಮುದ್ರಿತ ಪ್ರತಿಯನ್ನು ಸಮೀಕ್ಷಾದಾರರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಒಬ್ಬ ಸಮೀಕ್ಷಾದಾರರಿಗೆ 70 ಕ್ಕಿಂತ ಹೆಚ್ಚು ಮನೆಗಳನ್ನು ನಿಗದಿಗೊಳಿಸಿದರೆ ನಿಗದಿತ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳಿಸುವುದು ಅಸಾಧ್ಯ. ಒಬ್ಬ ಸಮೀಕ್ಷಾದಾರರಿಗೆ ಒಂದು ಊರಲ್ಲಿ/ವಾರ್ಡ್‌ ನಲ್ಲಿ ಕೆಲವು ಮನೆಗಳು ಇನ್ನೊಂದು ಊರಲ್ಲಿ/ವಾರ್ಡ್ ನಲ್ಲಿ ಕೆಲವು ಮನೆಗಳು ಹಂಚಿಕೆಯಾಗಿದ್ದು, ಇದರಿಂದ ಸಮೀಕ್ಷೆ ಮಾಡಲು ಶಿಕ್ಷಕರು ಹಲವು ಕೀ.ಮೀ. ದೂರ ಕ್ರಮಿಸಿಹೇಗೆ ಸಮೀಕ್ಷೆ ನಿರ್ವಹಿಸಬೇಕು?5. ಬಿ. ಎಲ್. ಒ. ಶಿಕ್ಷಕರಿಗೆ ಸಮೀಕ್ಷೆಗೆ ನೇಮಕಮಾಡಲಾಗಿದ್ದು, ಎರಡೂ ಕಾರ್ಯದಲ್ಲಿ ಯಾವುದಾದರು ಒಂದು ಕೆಲಸ ನಿರ್ವಹಿಸಲು ಸ್ಪಷ್ಟ ನಿರ್ದೇಶನ ನೀಡಲು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಾಗಲಕೋಟೆ ತಾಲೂಕಿನ ಶಿಕ್ಷಕರು ಪ್ರತಿಭಟನೆಯಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande