ಸೈಕನ್‌ನಲ್ಲೆ 12 ಜ್ಯೋತಿರ್ಲಿಂಗ ದರ್ಶನ ಪಡೆದ ಪೃಥ್ವಿರಾಜ್
ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಲೋಕ ಕಲ್ಯಾಣಕ್ಕಾಗಿ ನೃತ್ಯಪಟು ಯುವಕನೋರ್ವ ಸೈಕಲ್ ಯಾತ್ರೆ ಆರಂಭಿಸಿ 76 ದಿನದಲ್ಲಿ 13885 ಕಿಮೀ ಸೈಕಲ್ ಯಾತ್ರೆ ಮಾಡಿ ಸಾಧನೆ‌ ಮಾಡಿದ್ದಾನೆ. ಸೈಕಲ್ ಯಾತ್ರೆ ಮೂಲಕ 12 ಜ್ಯೋತಿರ್ಲಿಂಗ ದರ್ಶನವನ್ನು ಪೃಥ್ವಿರಾಜ ಅಂಬಿಗೇರ್ ಮಾಡಿದ್ದಾನೆ. ಪೃಥ್ವಿರಾಜ
12


ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಲೋಕ ಕಲ್ಯಾಣಕ್ಕಾಗಿ ನೃತ್ಯಪಟು ಯುವಕನೋರ್ವ ಸೈಕಲ್ ಯಾತ್ರೆ ಆರಂಭಿಸಿ 76 ದಿನದಲ್ಲಿ 13885 ಕಿಮೀ ಸೈಕಲ್ ಯಾತ್ರೆ ಮಾಡಿ ಸಾಧನೆ‌ ಮಾಡಿದ್ದಾನೆ. ಸೈಕಲ್ ಯಾತ್ರೆ ಮೂಲಕ 12 ಜ್ಯೋತಿರ್ಲಿಂಗ ದರ್ಶನವನ್ನು ಪೃಥ್ವಿರಾಜ ಅಂಬಿಗೇರ್ ಮಾಡಿದ್ದಾನೆ.

ಪೃಥ್ವಿರಾಜ ಬಾಗಲಕೋಟೆಯ ಲಕ್ಷ್ಮಿ ನಗರದ ನಿವಾಸಿ ಪೃಥ್ವಿರಾಜ ಅಂಬಿಗೇರ್ ಈ ಸಾಧನೆ ಮಾಡಿದ್ದು, ಪ್ರತಿನಿತ್ಯ ಸರಾಸರಿ 2 ನೂರು ಕಿಲೋಮೀಟರ್ ಸೈಕಲ್ ಸವಾರಿ ಮಾಡಿ ದಾಖಲೆ ನಿರ್ಮಿಸಿದ್ದಾನೆ.‌

ಬಾಗಲಕೋಟೆಯಿಂದ ಮಹಾರಾಷ್ಟ್ರ ಮಾರ್ಗವಾಗಿ 12 ಜ್ಯೋತಿರ್ಲಿಂಗಗಳನ್ನ ದರ್ಶನ ಪಡೆದುಕೊಂಡಿದ್ದಾರೆ.

ಮೊದಲು ಮಹಾರಾಷ್ಟ್ರದ ಭೀಮಾಶಂಕರ, ಕೃಷ್ಣೇಶ್ವರ ತ್ರಯಂಬಕೇಶ್ವರ. ನಂತರ ಸೋಮನಾಥ ,ನಾಗೇಶ್ವರ,ಓಂಕಾರೇಶ್ವರ, ಮಹಾಕಾಲೇಶ್ವರ, ಕೇದಾರನಾಥ,ಕಾಶಿ ವಿಶ್ವನಾಥ,ವೈದ್ಯನಾಥ, ಶ್ರೀಶೈಲ ಮಲ್ಲಿಕಾರ್ಜುನ, ರಾಮೇಶ್ವರಂ.

ಒಟ್ಟು12 ಜ್ಯೋತಿರ್ಲಿಂಗ ದರ್ಶನ ಮಾಡಿ ಪೃಥ್ವಿರಾಜ್ ತವರಿಗೆ ಮರಳಿದ್ದಾರೆ.

ಪ್ರತಿನಿತ್ಯ ಹಗಲು ವೇಳೆ ಸೈಕಲ್ ಯಾತ್ರೆ ಮಾಡುತ್ತಿದ್ದನು. ರಾತ್ರಿ ಪೆಟ್ರೋಲ್ ಪಂಪ್ ಹಾಗೂ ದೇವಸ್ಥಾನಗಳಲ್ಲಿ ಇದ್ದು ತದನಂತರ ಯಾತ್ರೆಯುದ್ದಕ್ಕೂ ಜನರಿಂದ ಬಾರಿ ಪ್ರಮಾಣದ ಮೆಚ್ಚುಗೆ‌ ಗಳಿಸಿದ್ದಾರೆ.

ಯಾತ್ರೆಯುದ್ದಕ್ಕೂ ಎಲ್ಲೂ ಒಂದೇ ಒಂದು ಕಡೆಯೂ ಪಂಚರ್ ಆಗದ ಸೈಕಲ್‌ನ ಮತ್ತೊಂದು ವಿಶೇಷವಾಗಿದೆ.‌ ವಾಪಸ್ ಊರಿಗೆ ಬಂದ ನಂತರ ಆರತಿ ಬೆಳಗಿ ಪುಷ್ಪವೃಷ್ಟಿ ಮಾಡಿ ಸ್ಥಳೀಯರು ಸ್ವಾಗತ ಮಾಡಿಕೊಂಡರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande