ನವದೆಹಲಿ, 25 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಪ್ರವಾಸದಲ್ಲಿದ್ದಾರೆ. ಮೊದಲು ಗ್ರೇಟರ್ ನೋಯ್ಡಾದಲ್ಲಿ ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ–2025 ಉದ್ಘಾಟಿಸಿಲಿದ್ದಾರೆ.
ನಂತರ ರಾಜಸ್ಥಾನದ ಬಾಂಸವಾಡಾದಲ್ಲಿ ₹1.22 ಲಕ್ಷ ಕೋಟಿ ಮೌಲ್ಯದ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಲಿದ್ದು. ಇದರಲ್ಲಿ ಮಾಹಿ ಅಣುಶಕ್ತಿ ಯೋಜನೆ (₹42,000 ಕೋಟಿ), ಹಸಿರು ಶಕ್ತಿ, ಪಾನೀಯ ನೀರು, ಜಲ ಸಂಪನ್ಮೂಲ, ರಸ್ತೆ ಮತ್ತು ರೈಲು ಸಂಪರ್ಕ ಯೋಜನೆಗಳು ಸೇರಿವೆ.
ಇದೇ ವೇಳೆ ಮೋದಿ ಮೂರು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿ, 15 ಸಾವಿರಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa