ಲೇಹ್ : ಕರ್ಫ್ಯೂ ಮುಂದುವರಿಕೆ, ನಗರದಲ್ಲಿ ಶಾಂತಿ
ಲೇಹ್, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಮ್ಮು ಕಾಶ್ಮೀರದ ಲೇಹ್ ನಗರದಲ್ಲಿ ಇಂದೂ ಕರ್ಫ್ಯೂ ಜಾರಿಯಲ್ಲಿದೆ. ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ನಿರ್ಬಂಧಗಳನ್ನು ಜಾರಿಗೆ ತಂದಿದ್ದು, ನಗರದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಬುಧವಾರ ನಡೆದ ಘರ್ಷಣೆಯಲ್ಲಿ ನಾಲ್ವರು ಪ್ರತಿಭಟನಾಕಾರರು ಮೃತಪಟ್ಟ
ಲೇಹ್ : ಕರ್ಫ್ಯೂ ಮುಂದುವರಿಕೆ, ನಗರದಲ್ಲಿ ಶಾಂತಿ


ಲೇಹ್, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಮ್ಮು ಕಾಶ್ಮೀರದ ಲೇಹ್ ನಗರದಲ್ಲಿ ಇಂದೂ ಕರ್ಫ್ಯೂ ಜಾರಿಯಲ್ಲಿದೆ. ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ನಿರ್ಬಂಧಗಳನ್ನು ಜಾರಿಗೆ ತಂದಿದ್ದು, ನಗರದಲ್ಲಿ ಪರಿಸ್ಥಿತಿ ಶಾಂತವಾಗಿದೆ.

ಬುಧವಾರ ನಡೆದ ಘರ್ಷಣೆಯಲ್ಲಿ ನಾಲ್ವರು ಪ್ರತಿಭಟನಾಕಾರರು ಮೃತಪಟ್ಟಿದ್ದು, 40 ಮಂದಿಗೆ ಗಾಯವಾಯಿತು. ಅಶಿಸ್ತಿನ ಗುಂಪು ವಾಹನಗಳಿಗೆ ಬೆಂಕಿ ಹಚ್ಚಿ, ಸ್ಥಳೀಯ ಬಿಜೆಪಿ ಕಚೇರಿ ಮತ್ತು ಹಿಲ್ ಕೌನ್ಸಿಲ್ ಕಚೇರಿಯ ಕೆಲವು ಭಾಗಗಳನ್ನು ನಾಶಪಡಿಸಿತು. ನಂತರ ಪೊಲೀಸರು ಅಶ್ರುವಾಯು ಶೆಲ್ ಹಾಗೂ ಲಾಠಿಚಾರ್ಜ್ ನಡೆಸಿ ಘಟನೆಯನ್ನು ನಿಯಂತ್ರಿಸಿದರು.

ಈ ಸಂದರ್ಭ, ಉಪವಾಸ ಸತ್ಯಾಗ್ರಹದಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಕೌನ್ಸಿಲರ್ ಫುಂಟ್ಸಾಗ್ ಸ್ಟ್ಯಾನ್ಜಿನ್ ತ್ಸೆಪಾಗ್ ವಿರುದ್ಧ ಪ್ರಕರಣ ದಾಖಲಾಗಿದೆ.

ಲೇಹ್ ಅಪೆಕ್ಸ್ ಬಾಡಿ ಯುವ ವಿಭಾಗವು ರಾಜ್ಯ ಸ್ಥಾನಮಾನ, ಹಿಲ್ ಕೌನ್ಸಿಲ್ ವಿಸ್ತರಣೆ, ಪ್ರತ್ಯೇಕ ಲೋಕಸಭಾ ಸ್ಥಾನಗಳು ಮತ್ತು ಉದ್ಯೋಗ ಮೀಸಲಾತಿ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದೆ ಶೀಘ್ರ ಚರ್ಚೆ ನಡೆಸಲು ಒತ್ತಾಯಿಸುತ್ತಿದೆ. ಎಲ್ಎಬಿ ಮತ್ತು ಕಾರ್ಗಿಲ್ ಮೂಲದ ಕೆಡಿಎ ಈ ಚಳುವಳಿಯನ್ನು ಕಳೆದ ನಾಲ್ಕು ವರ್ಷಗಳಿಂದ ನಿರ್ವಹಿಸುತ್ತಿದ್ದು, ಹಲವು ಸುತ್ತಿನ ಮಾತುಕತೆಗಳು ನಡೆದಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande