ನಿರಂತರ ಮಳೆಗೆ ಭೂಮಿ ಕುಸಿತ
ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇದ್ದಕ್ಕಿದ್ದಂತೆ ಭೂಮಿ ಕುಸಿದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರ್ ಎಸ್.ಬಿ ಗ್ರಾಮದಲ್ಲಿ ನಡೆದಿದೆ.‌ ಭೂ ಕುಸಿತಕ್ಕೆ ೨೦ ಅಡಿ ವಿಸ್ತೀರ್ಣದ ಗುಂಡಿ ಬಿದ್ದಿದೆ.‌ ಗ್ರಾಮದ ರಾಮಲಿಂಗೇಶ್ವರ
ಮಳೆ


ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇದ್ದಕ್ಕಿದ್ದಂತೆ ಭೂಮಿ ಕುಸಿದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರ್ ಎಸ್.ಬಿ ಗ್ರಾಮದಲ್ಲಿ ನಡೆದಿದೆ.‌

ಭೂ ಕುಸಿತಕ್ಕೆ ೨೦ ಅಡಿ ವಿಸ್ತೀರ್ಣದ ಗುಂಡಿ ಬಿದ್ದಿದೆ.‌ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭೂಮಿ ಕುಸಿದಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಈ ಹಿಂದೆ ರೈತರು ದವಸ ಧಾನ್ಯಗಳನ್ನ ಶೇಕರಿಸಿ ಇಡುವ ತಾಣ ಇದಾಗಿತ್ತು.‌ ನಿರಂತರ ಮಳೆಗೆ ಅದು ಮುಚ್ಚಿ ಹೋಗಿತ್ತು. ನಿರಂತರ ಮಳೆಗೆ ರಸ್ತೆ ಕುಸಿದಿದೆ ಎಂದು ರೈತರು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande