ಭಾರತ ರೈಲು ಆಧಾರಿತ ಕ್ಷಿಪಣಿ ಉಡಾವಣೆ ಸಾಧನೆ
ನವದೆಹಲಿ, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಭಾರತವು ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದಿದ್ದು, ರೈಲುಗಳಿಂದ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಪಡೆದಿದೆ. 2,000 ಕಿಮೀ ವ್ಯಾಪ್ತಿಯ ಅಗ್ನಿ-ಪ್ರೈಂ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಈ ಪ್ರಯೋಗಕ್ಕಾಗಿ ಡಿಆರ್‌ಡಿಒ
Launcher


ನವದೆಹಲಿ, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಭಾರತವು ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದಿದ್ದು, ರೈಲುಗಳಿಂದ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಪಡೆದಿದೆ. 2,000 ಕಿಮೀ ವ್ಯಾಪ್ತಿಯ ಅಗ್ನಿ-ಪ್ರೈಂ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಈ ಪ್ರಯೋಗಕ್ಕಾಗಿ ಡಿಆರ್‌ಡಿಒ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ತಿಳಿಸಿದ್ದಾರೆ.

ಅಗ್ನಿ-ಪ್ರೈಂ ಕ್ಷಿಪಣಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ರೈಲು ಆಧಾರಿತ ಮೊಬೈಲ್ ಲಾಂಚರ್ ಮೂಲಕ ಪರೀಕ್ಷಿಸಲಾಗಿದ್ದು, ಯಾವುದೇ ಪೂರ್ವಭಾವಿ ಷರತ್ತುಗಳಿಲ್ಲದೆ ರೈಲು ಜಾಲದಲ್ಲಿ ಕಾರ್ಯನಿರ್ವಹಿಸಲು ಮತ್ತು ಕಡಿಮೆ ಗೋಚರತೆಯ ಪರಿಸ್ಥಿತಿಗಳಲ್ಲಿಯೂ ಉಡಾವಣೆ ಮಾಡಲು ಸಾಮರ್ಥ್ಯವಿದೆ. ಈ ಪ್ರಯೋಗವನ್ನು ಡಿಆರ್‌ಡಿಒ, ಎಸ್‌ಎಫ್‌ಸಿ ಮತ್ತು ಭಾರತೀಯ ಸಶಸ್ತ್ರ ಪಡೆಗಳು ಜಂಟಿಯಾಗಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಸಹ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಯಶಸ್ವಿ ಪ್ರಯೋಗದ ಮೂಲಕ ಭಾರತವು ರೈಲು ಆಧಾರಿತ ಕ್ಯಾನಿಸ್ಟರ್ ಉಡಾವಣಾ ವ್ಯವಸ್ಥೆಯನ್ನು ಹೊಂದಿರುವ ಆಯ್ದ ದೇಶಗಳ ಸಾಲಿನಲ್ಲಿ ಸೇರಿದೆ. ಇದು ಆತ್ಮನಿರ್ಭರ ಭಾರತ ಉಪಕ್ರಮದ ಪ್ರಮುಖ ಸಾಧನೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande