ನವದೆಹಲಿ, 25 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ದೆಹಲಿಯ ಭಾರತ್ ಮಂಟಪದಲ್ಲಿ ಸಂಜೆ ವರ್ಲ್ಡ್ ಫುಡ್ ಇಂಡಿಯಾ- 2025ಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
ಪಿಐಬಿ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 28ರವರೆಗೆ ನಡೆಯುವ ಈ ಮಹಾ ಸಮ್ಮೇಳನದಲ್ಲಿ ಭಾರತದ ಆಹಾರ ಸಂಸ್ಕರಣಾ ವಲಯದ ಸಾಮರ್ಥ್ಯ, ಸುಸ್ಥಿರತೆ ಮತ್ತು ಸಾವಯವ–ಪೌಷ್ಟಿಕ ಆಹಾರ ಉತ್ಪಾದನೆ ಪ್ರಾಧಾನ್ಯ ಪಡೆಯಲಿದೆ.
ಪಿಎಂಎಫ್‌ಎಂಇ ಯೋಜನೆಯಡಿ 26,000 ಫಲಾನುಭವಿಗಳಿಗೆ ₹770 ಕೋಟಿ ರೂ. ಮೌಲ್ಯದ ಸಾಲ ಆಧಾರಿತ ನೆರವು ಒದಗಿಸಲಾಗುವುದು.
ಕಾರ್ಯಕ್ರಮದಲ್ಲಿ 21 ದೇಶಗಳ 150 ಅಂತರರಾಷ್ಟ್ರೀಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಬಿ2ಬಿ, ಬಿ2ಜಿ ಹಾಗೂ ಜಿ2ಜಿ ವ್ಯವಹಾರ ಸಂವಾದಗಳು, ತಾಂತ್ರಿಕ ಅಧಿವೇಶನಗಳು ಮತ್ತು ಪ್ರದರ್ಶನಗಳು ಜರುಗಲಿವೆ.
14 ವಿಷಯಾಧಾರಿತ ಮಂಟಪಗಳಲ್ಲಿ ಜಾಗತಿಕ ಆಹಾರ ಸಂಸ್ಕರಣಾ ಕೇಂದ್ರವಾಗಿ ಭಾರತದ ಸ್ಥಾನ, ಸುಸ್ಥಿರತೆ, ನ್ಯೂಟ್ರಾಸ್ಯುಟಿಕಲ್ಸ್, ಪೋಷಕಾಹಾರ, ಸಾಕುಪ್ರಾಣಿ–ಸಸ್ಯ ಆಧಾರಿತ ಆಹಾರ ಮುಂತಾದ ವಿಷಯಗಳು ಚರ್ಚೆಗೆ ಬರಲಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa