ಸ್ವಚ್ಚತಾ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ
ಗದಗ, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗದಗ ನಗರದ ಚೆನ್ನಮ್ಮ ಸರ್ಕಲ್‌ನಿಂದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದವರೆಗೂ “ಸ್ವಚ್ಚತಾ ಹೀ ಸೇವಾ “ಅಭಿಯಾನದಡಿ ಸಾಮೂಹಿಕ ಸ್ವಚ್ಚತಾ ಶ್ರಮದಾನಕ್ಕೆ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ಸ್ವಚ್ಛೋತ್ಸವ ಎಂಬ ಶೀರ್ಷಿಕೆಯಡಿ
ಪೋಟೋ


ಗದಗ, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗದಗ ನಗರದ ಚೆನ್ನಮ್ಮ ಸರ್ಕಲ್‌ನಿಂದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದವರೆಗೂ “ಸ್ವಚ್ಚತಾ ಹೀ ಸೇವಾ “ಅಭಿಯಾನದಡಿ ಸಾಮೂಹಿಕ ಸ್ವಚ್ಚತಾ ಶ್ರಮದಾನಕ್ಕೆ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ ಸ್ವಚ್ಛೋತ್ಸವ ಎಂಬ ಶೀರ್ಷಿಕೆಯಡಿ ನಗರದಲ್ಲಿ ಚೆನ್ನಮ್ಮ ಸರ್ಕಲ್‌ನಿಂದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದವರೆಗೂ ಅಷ್ಟೇ ಸಿಮಿತವಾಗದೆ ನಗರದಲ್ಲಿ ಪ್ರತಿಯೊಂದು ವಾರ್ಡಗಳಿಗೂ “ಸ್ವಚ್ಚತಾ ಹೀ ಸೇವಾ“ ಅಭಿಯಾನವು ಗದಗದಲ್ಲಿ ಮಾದರಿಯಾಗುವಂತೆ ಪೌರಕಾರ್ಮಿಕರು ಮತ್ತು ಸ್ಥಳಿಯರು ಸಹಕರಿಸಿ ಸ್ವಚ್ಚವಾಗಿರಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದರ ಮುಖ್ಯ ಉದ್ದೇಶ ಸ್ವಚ್ಚಮೇವ ಜಯತೆ ಎನ್ನುವ ಉಕ್ತಿಯಂತೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೂಂಡರೆ ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ್ರ ಕೋಟೂರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ರೀಮತಿ ನಂದಾ ಹಣಬರಟ್ಟಿ, ಗದಗ-ಬೆಟಗೇರಿ ನUðರಸಭೆ ಪೌರಾಯುಕ್ತ ರಾಜಾರಾಮ್.ಎನ್.ಪವಾರ, ನಗರಸಭೆ ಪರಿಸರ ಅಭಿಯಂತರರು ಆನಂದ್.ಬದಿ ನಗರಸಭೆ ಸಾಹಾಯಕ ಕಾರ್ಯಪಾಲಕ ಅಭಿಯಂತರರು ಎಚ್.ಎ.ಬಂಡಿವಡ್ಡರ, ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪೌರ ಕಾರ್ಮಿಕರು, ಎನ್.ಎಸ್.ಎಸ್. ಎನ್ ಸಿಸಿ ವಿದ್ಯಾರ್ಥಿಗಳು, ಎನ್.ಜಿ.ಓ ಸಂಘ ಸಂಸ್ಥೆಯವರು, ಹಾಸ್ಟೆಲ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande