ದಾನಮ್ಮ ದೇವಿ ಸನ್ನಿಧಿಯಲ್ಲಿ ಅಭಿವೃದ್ಧಿ ಪರ್ವ : ಅಧ್ಯಕ್ಷ ಪಾಟೀಲ
ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮಹಾರಾಷ್ಟ್ರದ ಗುಡ್ಡಾಪುರದಲ್ಲಿ ವರದಾನಿ ದಾನಮ್ಮದೇವಿ ಸನ್ನಿಧಿಯಲ್ಲಿ ದಾನಮ್ಮದೇವಿ ದೇವಾಲಯ ಟ್ರಸ್ಟ್ ವತಿಯಿಂದ ದೀಪ ಸ್ತಂಭಗಳ ನಿರ್ಮಾಣ, ನಂದಿ ಪ್ರತಿಷ್ಠಾಪನೆ , ಸುಸಜ್ಜಿತ ಶಾಲಾ ಕಟ್ಟಡ, ಉದ್ಯಾನವನ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಚಟುವಟ
ಬಿಜೆಪಿ


ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮಹಾರಾಷ್ಟ್ರದ ಗುಡ್ಡಾಪುರದಲ್ಲಿ ವರದಾನಿ ದಾನಮ್ಮದೇವಿ ಸನ್ನಿಧಿಯಲ್ಲಿ ದಾನಮ್ಮದೇವಿ ದೇವಾಲಯ ಟ್ರಸ್ಟ್ ವತಿಯಿಂದ ದೀಪ ಸ್ತಂಭಗಳ ನಿರ್ಮಾಣ, ನಂದಿ ಪ್ರತಿಷ್ಠಾಪನೆ , ಸುಸಜ್ಜಿತ ಶಾಲಾ ಕಟ್ಟಡ, ಉದ್ಯಾನವನ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಶ್ರೀ ದಾನಮ್ಮ ದೇವಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಹಾಗೂ ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸುಕ್ಷೇತ್ರ ಗುಡ್ಡಾಪುರದಲ್ಲಿ ಬೀದಿ ದೀಪ ಸೇರಿದಂತೆ ಅಭಿವೃದ್ಧಿ ಸೌಕರ್ಯಗಳ ಕೊರತೆ ಇತ್ತು. ಹಿಂದಿನ ವರ್ಷ ನಾವೆಲ್ಲರೂ ಟ್ರಸ್ಟ್ ಪದಾಧಿಕಾರಿಗಳಿಗಾಗಿ ಅಧಿಕಾರ ಸ್ವೀಕರಿಸಿ ದೇವಾಲಯದ ಸನ್ನಿಧಿಯಲ್ಲಿ ಅಭಿವೃದ್ಧಿ ಕಾರ್ಯ ಸಂಕಲ್ಪ ಮಾಡಿದ್ದೆವು. ಅದರನ್ವಯ ದೇವಾಲಯದ ಸರ್ವತೋಮುಖ ಪ್ರಗತಿಗೆ ಆದ್ಯತೆ ನೀಡಲಾಗಿದೆ. ೩೧ ಲಕ್ಷ ರೂ. ವೆಚ್ಚದಲ್ಲಿ ದೀಪಸ್ತಂಭಗಳ ಸ್ಥಾಪನೆ, ಗೋಪುರ ಹಾಗೂ ಮಹಾದ್ವಾರಕ್ಕೆ ಬಣ್ಣ ಹಾಗೂ ಅಲಂಕಾರ ಕಾರ್ಯ, ದೇವಿ ಅನುಷ್ಠಾನಗೈದ ಪವಿತ್ರ ಸ್ಥಳ ಕಾತರಕಂಠಿ ಸ್ಥಳದಲ್ಲಿ ದೇವಾಲಯ ನಿರ್ಮಾಣ ಹಾಗೂ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಅಲ್ಲಿರುವ ವಿಶಾಲ ಜಾಗೆಯಲ್ಲಿ ಉದ್ಯಾನವನ ನಿರ್ಮಾಣ, ಯಾತ್ರಿ ನಿವಾಸ ನಿರ್ಮಾಣಕ್ಕೆ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದರು.

ಹಿರಿಯ ರಾಜಕಾರಣಿ ಶ್ಯಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕ ದಾನಿಗಳ ನೆರವಿನಿಂದ ಅನೇಕ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ನಡೆದಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ದೊಡ್ಡ ಅನುದಾನ ನೀಡುತ್ತಿವೆ ಎಂದರು.

ಕರ್ನಾಟಕ ಭವನದಲ್ಲಿ ಅನ್ನದಾಸೋಹಕ್ಕೆ ೮೦ ಟೇಬಲ್ ಅಳವಡಿಸಲಾಗಿದ್ದು, ಏಕಕಾಲಕ್ಕೆ ಸಾವಿರ ಜನರು ಪ್ರಸಾದ ಸೇವಿಸುವ ವ್ಯವಸ್ಥೆ ಇದ್ದು, ಈಗ ಪುನಃ ೮೦ ಟೇಬಲ್ ಅಳವಡಿಸುವ ಮೂಲಕ ಇನ್ನೂ ಸಾವಿರ ಜನರು ಒಟ್ಟು ಏಕಕಾಲಕ್ಕೆ ೨ ಸಾವಿರ ಜನರು ಅನ್ನಪ್ರಸಾದ ಸೇವಿಸುವ ನಿಟ್ಟಿನಲ್ಲಿ ಅಗತ್ಯ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದರು.

ದೇವಾಲಯದ ದಾನಮ್ಮನ ಸನ್ನಿಧಿಯಲ್ಲಿ ಜ್ಞಾನ ದಾಸೋಹಿ, ಅನ್ನ ದಾಸೋಹಿ ದಾನಮ್ಮದೇವಿ ಸನ್ನಿಧಿಯಲ್ಲಿ ಅನ್ನದ ಜೊತೆಗೆ ಜ್ಞಾನ ದಾಸೋಹ ಮಾಡಲಾಗುತ್ತಿದ್ದು, ಬಡವರಿಗೂ ಸಹ ಅನುಕೂಲವಾಗಲು ಅತ್ಯಂತ ಕಡಿಮೆ ಅದು ಸಾಂಕೇತಿಕ ಎನ್ನುವಷ್ಟು ರೀತಿಯಲ್ಲಿ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ, ೩ ಕೋಟಿ ರೂ.ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.

ಡಾ.ಮಹಾಂತೇಶ ಬಿರಾದಾರ ಅವರು ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದಂತೆ ನಮ್ಮ ಜಿಲ್ಲೆಯವರೇ ವಿಷನ್ ಗ್ರುಪ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ೨೫ ಕೋಟಿ ರೂ. ಅನುದಾನ ನೀಡುವಂತೆ ಅವರಿಗೂ ಪತ್ರ ಬರೆಯಲಾಗುವುದು, ದೇವಿ ಕೃಪೆ ತೋರಿದರೆ ಅವರು ಅನುದಾನ ಬಿಡುಗಡೆ ಮಾಡಿಸಲಿ ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ದೇವಾಲಯದ ಧರ್ಮದರ್ಶಿ ಸಾಗರ ಚಂಪಣ್ಣವರ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande