ಬಳ್ಳಾರಿ : ದೇವಿ ಪುರಾಣದ ವೇದಿಕೆಯಲ್ಲಿ ಎಸ್.ಎಲ್. ಭೈರಪ್ಪ ಅವರಿಗೆ ಶ್ರದ್ಧಾಂಜಲಿ
ಬಳ್ಳಾರಿ, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸಾಹಿತಿ ಎಸ್.ಎಲ್. ಭೈರಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಕಲ್ಯಾಣ ಸ್ವಾಮಿ ಮಠದಲ್ಲಿ ನಡೆಯುತ್ತಿರುವ ನವರಾತ್ರಿಯ ಶ್ರೀ ದೇವಿ ಪುರಾಣ ವೇದಿಕೆಯಲ್ಲಿ ಮೌನಾಚರಿಸುವ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಕಲ್ಯಾಣಸ್ವಾಮಿ ಮಠದ ಕಲ್ಯಾಣ ಶ್ರೀಗಳು
ಬಳ್ಳಾರಿ : ದೇವಿ ಪುರಾಣದ ವೇದಿಕೆಯಲ್ಲಿ ಎಸ್.ಎಲ್. ಭೈರಪ್ಪ ಅವರಿಗೆ ಶ್ರದ್ಧಾಂಜಲಿ


ಬಳ್ಳಾರಿ, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಾಹಿತಿ ಎಸ್.ಎಲ್. ಭೈರಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಕಲ್ಯಾಣ ಸ್ವಾಮಿ ಮಠದಲ್ಲಿ ನಡೆಯುತ್ತಿರುವ ನವರಾತ್ರಿಯ ಶ್ರೀ ದೇವಿ ಪುರಾಣ ವೇದಿಕೆಯಲ್ಲಿ ಮೌನಾಚರಿಸುವ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಕಲ್ಯಾಣಸ್ವಾಮಿ ಮಠದ ಕಲ್ಯಾಣ ಶ್ರೀಗಳು, ಎಸ್.ಎಲ್. ಭೈರಪ್ಪ ಅವರು ಕನ್ನಡದ ಕಾದಂಬರಿಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಭೈರಪ್ಪ ಅವರು ಭೌತಿಕವಾಗಿ ನಮ್ಮಂದಿಗಿಲ್ಲ. ಆದರೆ, ಅವರ ಅಕ್ಷರಗಳು - ವಿಚಾರಗಳು ಮತ್ತು ಚಿಂತನೆಗಳು ಅವರ ಸಾಹಿತ್ಯ ಸಜೀವವಾಗಿ ಇರುವವರೆಗೂ ನಮ್ಮೆಲ್ಲರೊಂದಿಗೆ ಇರುತ್ತಾರೆ ಎಂದರು.

ಎಸ್.ಎಲ್. ಭೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ ಆಗಬೇಕಿತ್ತು. ಆದರೆ, `ಸರಸ್ವತಿ ಸನ್ಮಾನ್'ರಾಗಿ ಅಸು ನೀಗಿದ್ದಾರೆ. ನೂರು ವರ್ಷಗಳ ಪೂರ್ಣಾಯುಷ್ಯ ಅವರಿಗೆ ಸಿಗಬೇಕಿತ್ತು, ಅನಾರೋಗ್ಯದ ಕಾರಣ ನಮ್ಮೊಂದಿಗಿಲ್ಲ. ಕನ್ನಡ ಸಾಹಿತ್ಯವನ್ನು ವಿವಿಧ ಭಾಷೆಗಳಿಗೆ ತಲುಪಿಸಿದ್ದ ಭೈರಪ್ಪ ಅವರು ನಮ್ಮ ಕಾಲದ ಕನ್ನಡ ಸಾಹಿತ್ಯರತ್ನ ಎಂದು ಶ್ರೀಗಳು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande