ರಾಯಚೂರು : ಸ್ವಯಂಸೇವಕರಾಗಲು ನೋಂದಣಿಗೆ ಅರ್ಜಿ ಆಹ್ವಾನ
ರಾಯಚೂರು, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಿಲ್ಲಾ ಸಮಾದೇಷ್ಟರವರ ಕಾರ್ಯಾಲಯ, ಗೃಹರಕ್ಷಕದಳದಿಂದ ನಾಗರೀಕ ರಕ್ಷಣಾ ಸ್ವಯಂಸೇವಕರಾಗಲು ನೋಂದಣಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಯುದ್ಧದಂತಹ ಸಂದರ್ಭಗಳಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್
ರಾಯಚೂರು : ಸ್ವಯಂಸೇವಕರಾಗಲು ನೋಂದಣಿಗೆ ಅರ್ಜಿ ಆಹ್ವಾನ


ರಾಯಚೂರು, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಸಮಾದೇಷ್ಟರವರ ಕಾರ್ಯಾಲಯ, ಗೃಹರಕ್ಷಕದಳದಿಂದ ನಾಗರೀಕ ರಕ್ಷಣಾ ಸ್ವಯಂಸೇವಕರಾಗಲು ನೋಂದಣಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯಲ್ಲಿ ಯುದ್ಧದಂತಹ ಸಂದರ್ಭಗಳಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಕಿಸುವ ಬಗ್ಗೆ ಸ್ವಯಂ ಸೇವಕರ ಅಗತ್ಯವಿರುವುದರಿಂದ ಸಿವಿಲ್ ಡಿಫೆನ್ಸ್ ಆ್ಯಕ್ಟ್ 1968 ರಂತೆ ಪ್ರತಿ 100 ನಾಗರೀಕರಿಗೆ ಒಬ್ಬರಂತೆ ಒಟ್ಟು 1000 ಜನ ಸೇವಾ ಮನೋಭಾವವುಳ್ಳ ಪೌರರಕ್ಷಣಾ ಸ್ವಯಂ ಸೇವಕರರು 19 ವರ್ಷ ಮೇಲ್ಪಟ್ಟ ಹಾಗೂ 4ನೇ ತರಗತಿ ಉತ್ತೀರ್ಣರಾದವರು ವೆಬ್‌ಸೈಟ್ ವಿಳಾಸ: www.civildefencewarriors.gov.in ನಲ್ಲಿ ಅಕ್ಟೋಬರ್ 25ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ದೈಹಿಕವಾಗಿ ಸಧೃಡವಾಗಿರಬೇಕು. ನಾಗರೀಕ ಪೌರರಕ್ಷಣಾ ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಯಾವುದೇ ಮಾಸಿಕ ವೇತನ ಇರುವದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕದಳ ಕಚೇರಿ ದೂರವಾಣಿ ಸಂಖ್ಯೆ: 08532-221679, ಲಾಲಸಾಬ್ ಪೆಂಡಾರೆ, ಸಹಾಯಕ ಬೋಧಕರ ಮೊಬೈಲ್ ಸಂಖ್ಯೆ: 9632410177 ಅಥವಾ ಶಕ್ತಿನಗರ ಪೌರರಕ್ಷಣಾ ಕಚೇರಿ ಮೌನಾ ಯೂನಿಟ್ ಆಫೀಸರ್ ಮೊಬೈಲ್ ಸಂಖ್ಯೆ: 9741333806ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಸಮಾದೇಷ್ಟರು, ಗೃಹರಕ್ಷಕ ದಳದ 2ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande