ಕೋಲ್ಕತ್ತಾ, 25 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು, ನಾಳೆ ಕೋಲ್ಕತ್ತಾಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿ ಮೂರು ಪ್ರಮುಖ ದುರ್ಗಾ ಪೆಂಡಲ್‌ಗಳನ್ನು ಉದ್ಘಾಟಿಸಲಿದ್ದಾರೆ.
ರಾಜ್ಯ ಬಿಜೆಪಿ ನೀಡಿರುವ ಮಾಹಿತಿ ಪ್ರಕಾರ, ಶಾ ಗುರುವಾರ ರಾತ್ರಿ ಕೋಲ್ಕತ್ತಾಗೆ ಆಗಮಿಸುತ್ತಾರೆ. ಶುಕ್ರವಾರ ಬೆಳಿಗ್ಗೆ 11:20 ಕ್ಕೆ ಲೇಕ್ ಅವೆನ್ಯೂಯಲ್ಲಿ ಸೇವಕ ಸಂಘ ಪೂಜಾ ಪೆಂಡಲ್ ಅನ್ನು ಉದ್ಘಾಟಿಸಲಿದ್ದಾರೆ. ಬಳಿಕ ಅವರು ಉತ್ತರ ಕೋಲ್ಕತ್ತಾದ ಸಂತೋಷ್ ಮಿತ್ರ ಸ್ಕ್ವೇರ್ (ಲೆಬುಟಲಾ ಪಾರ್ಕ್) ದುರ್ಗಾ ಪೆಂಡಲ್ ಅನ್ನು ಉದ್ಘಾಟಿಸಲಿದ್ದಾರೆ.
2026ರ ವಿಧಾನ ಸಭಾ ಚುನಾವಣೆಯನ್ನು ಗಮನಿಸಿ, ಶಾ ಅವರ ಭೇಟಿ ವಿಶೇಷ ರಾಜಕೀಯ ಮಹತ್ವ ಹೊಂದಿದ್ದು, ದುರ್ಗಾ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಬಿಜೆಪಿ ಪಕ್ಷವು ಬಂಗಾಳದ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಸಂಪರ್ಕವನ್ನು ಬಲಪಡಿಸಲು ಮತ್ತು ಮತದಾರರಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa