ರಾಯಚೂರು, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ದೇಶದ ಜನರಲ್ಲಿ ಸಂಸ್ಕೃತಿ, ಸಂಸ್ಕಾರ, ಅನ್ನದಾಸೋಹ ಜೊತೆಗೆ ಸಮಾಜದ ಶಾಂತಿ ಕಾಪಾಡುವಲ್ಲಿ ಮಠಗಳ ಪಾತ್ರ ಪ್ರಮುಖವಾಗಿದೆ. ಮಠ- ಮನ್ಯಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶ್ರೀಗಳು ಚಿಕ್ಕವರಾದರು ಶ್ರೀಮಠದ ಭಕ್ತರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ವೈದ್ಯರಾದ ಡಾ. ಬಸನಗೌಡ ಪಾಟೀಲ್ ಅವರು ತಿಳಿಸಿದ್ದಾರೆ.
ಮಂಗಳವಾರಪೇಠೆ ಹಿರೇಮಠದಿಂದ ನವರಾತ್ರಿ ಉತ್ಸವ ಹಾಗೂ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಮಠಗಳು ಜಾತಿ, ಧರ್ಮ, ಹೆಣ್ಣು, ಗಂಡು ಎಂಬ ಬೇದ ಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುತ್ತಿವೆ. ಮಠಗಳು ಅಸಿದವರಿಗೆ ಅನ್ನ ನೀಡಿವೆ, ಜ್ಞಾನ, ಸಂಸ್ಕಾರ ಕಲಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಎಲ್ ವಿಡಿ ಮಹಾ ವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ತರಾದ ಅರುಣಾ ಹಿರೇಮಠ ಮಾತನಾಡಿ, ಮಠಗಳು ಸಮಾದಲ್ಲಿ ಎಲ್ಲರನ್ನು ಸರಿದಾರಿಯಲ್ಲಿ ಕರೆದುಕೊಂಡು ಹೋಗುವ ಪವಿತ್ರ ಕೇಂದ್ರಗಳಾಗಿವೆ. ಪ್ರತಿ ದೇವಸ್ಥಾನದ ಮುಖ್ಯಧ್ವಾರದಲ್ಲಿ ಗಂಟೆಗಳನ್ನು ಹಾಕಲಾಗಿರುತ್ತೆ ಗಂಟೆಯ ಸಂಕೇತವೇನೆಂದರೆ ನಮ್ಮ ಕಿವಿಗಳು ಕೇಳಿದ ಕೆಟ್ಟ ವಿಚಾರ, ವಿಷಯಗಳು ಗಂಟೆಯ ಶಬ್ದವನ್ನು ಕೇಳಿದ ತಕ್ಷಣ ಕಟ್ಟ ವಿಚಾರಗಳು ನಮ್ಮಿಂದ ತೊಲಗಲಿ ಎಂಬುದಾಗಿದೆ ಎಂದು ತಿಳಿಸಿದರು.
ನಂತರ ಉಡಮಗಲ್ ಮಠದ ಶ್ರೀಶಾಂಭವಿ ರಾಜಯೋಗಿ ರಾಚೋಟೇಶ್ವರ ಹಿರೇಮಠದ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಪ್ರವಚನ ನೀಡಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಹಿರೇಮಠ, ಬಸವರಾಜ ಶ್ರೀ ಮಠದ ಭಕ್ತಾದಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್