ವಿಜಯಪುರ, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸಂತೆಗೆ ಬಂದವರ ವಾಹನಗಳ ಮೇಲೆ ಪೋಲಿಸರು ಲಾಠಿಯಿಂದ ಹೊಡೆದು ವಾಹನಗಳ ಗ್ಲಾಸ್ ಒಡೆದು ಹಾಕಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಗ್ರಾಮದಲ್ಲಿ ನಡೆದಿದೆ.
ಟಂಟಂ ಸೇರಿ ಹಲವು ವಾಹನಗಳ ಗ್ಲಾಸ್‌ಗಳನ್ನು ಪೊಲೀಸರು ಪುಡಿ ಪುಡಿ ಮಾಡಿದ್ದಾರೆ ಎಂದು ವಾಹನಗಳ ಮಾಲೀಕರಿಂದ ರಸ್ತೆ ತಡೆ ನಡೆಸಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು.
ಪಿಎಸ್‌ಐ ಸೇರಿ ಕೆಲ ಪೊಲೀಸರು ವಿರುದ್ಧ ಗ್ಲಾಸ್ ಒಡೆದಿದ್ದಾರೆ ಎಂದು ವಾಹನಗಳ ಮಾಲೀಕರು ಆರೋಪಿಸಿದರು. ವಾಹನಗಳ ಮೇಲೆ ಹುಚ್ಚಾಟ ಮೆರೆದ ಕೆರೂರು ಪೊಲೀಸರ ವಿರುದ್ಧ ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಅದಕ್ಕಾಗಿ ಹಿರಿಯ ಪೊಲೀಸ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande