ಗ್ರಾಮೀಣ ಪ್ರದೇಶದಲ್ಲಿ ವೃತ್ತಿ ರಂಗಭೂಮಿ ಗಟ್ಟಿ : ಪತ್ರಕರ್ತ ಗಣೇಶ್ ಅಮೀನಗಡ
ಮರಿಯಮ್ಮನಹಳ್ಳಿ, 23 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗ್ರಾಮೀಣ ರಂಗಭೂಮಿ ಎಲ್ಲರನ್ನೂ ಒಂದುಗೂಡಿಸುವಲ್ಲಿ ತೊಡಗಿಕೊಂಡಿದೆ ಎಂದು ನಾಟಕಕಾರ, ಹಿರಿಯ ಪತ್ರಕರ್ತ ಗಣೇಶ್ ಅಮೀನಗಡ ಅವರು ತಿಳಿಸಿದ್ದಾರೆ. ದುರ್ಗಾದಾಸ್ ಕಲಾಮಂದಿರದಲ್ಲಿ ರಂಗಚೌಕಿ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತ
ಗ್ರಾಮೀಣ ಪ್ರದೇಶದಲ್ಲಿ ವೃತ್ತಿ ರಂಗಭೂಮಿ ಗಟ್ಟಿಯಾಗಿದೆ - ಪತ್ರಕರ್ತ ಗಣೇಶ್ ಅಮೀನಗಡ


ಮರಿಯಮ್ಮನಹಳ್ಳಿ, 23 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗ್ರಾಮೀಣ ರಂಗಭೂಮಿ ಎಲ್ಲರನ್ನೂ ಒಂದುಗೂಡಿಸುವಲ್ಲಿ ತೊಡಗಿಕೊಂಡಿದೆ ಎಂದು ನಾಟಕಕಾರ, ಹಿರಿಯ ಪತ್ರಕರ್ತ ಗಣೇಶ್ ಅಮೀನಗಡ ಅವರು ತಿಳಿಸಿದ್ದಾರೆ.

ದುರ್ಗಾದಾಸ್ ಕಲಾಮಂದಿರದಲ್ಲಿ ರಂಗಚೌಕಿ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು.

ರಂಗಭೂಮಿ ಕುರಿತು ಮಹಾರಾಷ್ಟ್ರದಲ್ಲಿ ಒಂದು ಮಾತಿದೆ. ಒಬ್ಬರೇ ಇದ್ದರೆ ನಾಟಕ ನೋಡುತ್ತಾರೆ. ಇಬ್ಬರು ಇದ್ದರೆ ನಾಟಕ ಬಗ್ಗೆ ಚರ್ಚೆ ನಡೆಸುತ್ತಾರೆ. ಮೂವರು ಇದ್ದರೆ ನಾಟಕನೇ ಮಾಡುತ್ತಾರೆ. ಅಂತಹ ಅಭಿರುಚಿನೂ ನಮ್ಮಲ್ಲಿ ಬರಬೇಕಾಗಿದೆ ಎಂದರು.

ಮಹಾರಾಷ್ಟ್ರದಲ್ಲಿ ರಂಗಭೂಮಿಗೆ ಪ್ರತಿಯೊಬ್ಬ ನೌಕರರು ತಮ್ಮ ಸಂಬಳದಲ್ಲಿ ಇಂತಿಷ್ಟು ಹಣವನ್ನು ತೆಗೆದಿಟ್ಟು ರಂಗಭೂಮಿಯನ್ನು ಬೆಳಸುತ್ತಿದ್ದಾರೆ. ಕನ್ನಡ ರಂಗಭೂಮಿ ಇತ್ತೀಚಿಗೆ ಸೊರಗುತ್ತಿದೆ. ಸೊರಗುತ್ತಿರುವ ರಂಗಭೂಮಿಯನ್ನು ಶ್ರೀಮಂತಗೊಳಿಸಬೇಕಾಗಿದೆ. ಗ್ರಾಮೀಣ ರಂಗಭೂಮಿ ಬಹಳ ಗಟ್ಟಿಯಾಗಿದೆ ಎಂದು ಅವರು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲಿ ಕಂದಗಲ್ ಹನುಮಂತರಾಯರ ರಕ್ತರಾತ್ರಿ ನಾಟವು ಸಾಕಷ್ಟು ಪ್ರಯೋಗಗಳನ್ನು ಕಂಡಿದೆ. ಈ ಜಿಲ್ಲೆಯಲ್ಲಿ ಸಮೃದ್ದವಾದ ಕಲಾವಿದರ ತವರೂರಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಜೋಳದರಾಶಿ ದೊಡ್ಡನಗೌಡ್ರು, ದುರ್ಗಾದಾಸ್. ಎಲಿವಾಳ ಸಿದ್ದಯ್ಯ, ಬಳ್ಳಾರಿ ಸುಭದ್ರಮ್ಮ ಮಸ್ಸೂರ್, ಮರಿಯಮ್ಮನಹಳ್ಳಿಯ ನಾಗರತ್ನಮ್ಮಸೇರಿದಂತೆ ಅನೇಕ ಹಿರಿಯ ಕಲಾವಿದರು ರಂಗಭೂಮಿಯನ್ನು ಬೆಳೆಸಿದ್ದಾರೆ ಮತ್ತು ಮೆರೆಸಿದ್ದಾರೆ. ಮರಿಯಮ್ಮನಹಳ್ಳಿ ಎಂದರೆ ನಾಗರತ್ನಮ್ಮ, ನಾಗರತ್ನಮ್ಮ ಎಂದರ ಮರಿಯಮ್ಮನಹಳ್ಳಿ ಎಂಬಷ್ಟುರ ಮಟ್ಟಿಗೆ ಕಲಾವಿದರು ಬೆಳೆದಿದ್ದಾರೆ ಎಂದು ಅವರು ಹೇಳಿದರು.

ಮೈಸೂರಿನ ಕವಿತಾ ರಂಗ ತಂಡ ಅಭಿನಯಿಸುವ ಕೌದಿ ನಾಟಕವು ಸೌಹಾರ್ದತೆಯ ಸಂಕೇತವಾಗಿದ್ದು, ಎಲ್ಲಾ ಬಣ್ಣಬಣ್ಣದ ಹಳೆಯ ಬಟ್ಟೆಗಳನ್ನು ಹೊಂದಿರುವ ಸೌಹಾರ್ದತೆಯ ಸಂಬಂಧ ಇರುವಂತಹ ಒಂದು ಕಲೆಯಾಗಿ ಕೌದಿಯು ಬೆಚ್ಚನೆ ಹೊದಿಕೆಯಾಗಿದೆ. ಕೌದಿ ಚಳಿಗಾಲದಲ್ಲಿ ಬೆಚ್ಚಗೆ, ಬೇಸಿಗೆಯಲ್ಲಿ ತಂಪಾಗಿರುತ್ತದೆ. ಇಂತಹ ಕೌದಿ ಎಲ್ಲಾ ಬಣ್ಣಗಳನ್ನು ಹೊಂದಿರುವ ಬೆಚ್ಚನೆಯ ಹೊದಿಕೆಯಾಗಿದ್ದು, ಗ್ರಾಮೀಣ ಬಡ ಸಮುದಾಯಗಳ ಸೌಹಾರ್ತೆಯ ಸಂಕೇತವಾಗಿದೆ ಇದು ಎಲ್ಲದನ್ನೂ ಕೌದಿ ನಾಟಕ ವಿವರಿಸುತ್ತದೆ ಎಂದು ಅವರು ಹೇಳಿದರು.

ಕೌದಿ ನಾಟವು ಏಕವ್ಯಕ್ತಿ ಅಭಿನಯದ ನಾಟಕವಾಗಿದ್ದು, ಈ ನಾಟಕ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ. ಮರಿಯಮ್ಮ ನಹಳ್ಳಿಯಲ್ಲಿ 48 ನೇ ಪ್ರದರ್ಶನವಾಗಿದೆ. 50 ನೇ ಪ್ರದರ್ಶವನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರದರ್ಶನವಾಗಲಿದೆ ಎಂದು ಅವರು ವಿವರಿಸಿದರು.

ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕøತೆ ಡಾ. ಕೆ. ನಾಗರತ್ನಮ್ಮ ಸಮಾರೋಪ ನುಡಿಗಳಾಡಿದರು. ಪದ್ಮಶ್ರೀ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಸಮಾಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಶಿಕ್ಷಕ ಬಿ.ಎಂ.ಎಸ್.ಮೃತ್ಯುಂಜಯ ಸಭೆಯಲ್ಲಿ ಮಾತನಾಡಿದರು.

ಸ್ಥಳೀಯ ವಿ.ಪ್ರಾ.ಗ್ರಾ.ಕೃ.ಸ. ಸಂಘದ ಅಧ್ಯಕ್ಷ ಬಿ. ವಿಜಯಕುಮಾರ್, ಲಲಿತಕಲಾ ರಂಗದ ಅಧ್ಯಕ್ಷ ಎಚ್. ಮಂಜುನಾಥ, ರಂಗಚೌಕಿ ಕಲಾ ಟ್ರಸ್ಟ್‍ನ ಕಾರ್ಯದರ್ಶಿ ಪುಷ್ಪ ಪಿ. ಸಂಗೀತ ಶಿಕ್ಷಕ ಮಲ್ಲವಿ ಆರ್. ಭಟ್, ಆರೋಗ್ಯನಿರೀಕ್ಷಣಾಧಿಕಾರಿ ಜಿ. ಸೋಮಶೇಖರ್, ಕೆಎಸ್‍ಆರ್‍ಟಿ ಚಾಲಕ ಎಂ. ರಾಮಾಂಜಿನೇಯ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಪುಷ್ಪ ಪಿ. ಸ್ವಾಗತಿಸಿ, ನಿರೂಪಿಸಿದರು. ರಂಗಚೌಕಿ ಕಲಾ ಟ್ರಸ್ಟ್‍ನ ಅಧ್ಯಕ್ಷ ಸರದಾರ ಬಿ. ವಂದಿಸಿದರು.

ಮೈಸೂರಿನ ಕವಿತಾ ರಂಗ ತಂಡದಿಂದ ಗಣೇಶ್ ಅಮೀನಗಡ ರಚಿಸಿರುವ ಜಗದೀಶ್ ಆರ್. ಜಾಣಿ ನಿರ್ದೇಶನದಲ್ಲಿ ಭಾಗ್ಯಶ್ರೀ ಬಿ. ಪಾಳಾ ಕೌದಿ ನಾಟಕ ಅಭಿನಯಿಸಿದರು. ನಂತರ ಗೀತಾಮೃತ ಕಲಾ ಟ್ರಸ್ಟ್‍ನಿಂದ ಬಿ.ಎಂ. ಯೋಗೇಶ್ ನಿರ್ದೇಶನದ ಮುದಿಕಿ ಮುದುವೆ ನಾಟಕ ಪ್ರದರ್ಶನಗೊಂಡಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande