ಕೊಪ್ಪಳ, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕನ್ನಡ ನುಡಿ ಭಾಷೆ ಉಳಿಸಿ, ಬೆಳೆಸುವ ಕೆಲಸ ಮಾಡೋಣ, ರಾಜ್ಯದ ಗಡಿನಾಡು ಪ್ರದೇಶದಲ್ಲಿ ಕನ್ನಡ ನುಡಿ ಭಾಷೆಗಳ ಮೇಲೆ ಆಗುತ್ತಿರುವ ದಬ್ಬಾಳಿಕೆಗಳನ್ನು ಅಧ್ಯಯನ ಮಾಡಿ ಪರಿಹಾರಕ್ಕಾಗಿ ಸರಕಾರದ ಗಮನ ಸೆಳೆಯಲು ಶ್ರಮವಹಿಸಿ ಕನ್ನಡಕ್ಕಾಗಿ ದುಡಿಯುತ್ತೇನೆ ಎಂದು ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ಜಿ.ಎಸ್. ಗೋನಾಳ ಹೇಳಿದ್ದಾರೆ.
ನಗರ ಪ್ರವಾಸಿ ಮಂದಿರದಲ್ಲಿ ಕನ್ನಡ ಅಭಿವೃದ್ಧಿ ಜಾಗೃತಿ ಸಮಿತಿ ನೂತನ ಸದಸ್ಯರಾಗಿ ಆಯ್ಕೆರಾದ ಜಿ.ಎಸ್. ಗೋನಾಳ ಹಾಗೂ ಸಿದ್ದಲಿಂಗಪ್ಪ ಕೊಟ್ನೆಕಲ್ಲ ರವರಿಗೆ ಅವರ ಸ್ನೇಹ ಬಳಗದಿಂದÀ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕನ್ನಡ ಅಭಿವೃದ್ಧಿ ಜಾಗೃತಿ ಸಮಿತಿ ನೂತನ ಸದಸ್ಯರಾಗಿ ಸಿದ್ದಲಿಂಗಪ್ಪ ಕೊಟ್ನೆಕಲ್ಲ ಅವರು ಸನ್ಮಾನ ಸ್ವೀಕÀರಿÀಸಿ ಮಾತನಾಡಿ, ಕನ್ನಡ ನಾಡು ನುಡಿ ಭಾಷೆಯ ಸರ್ವಾಂಗಿಣ ಪ್ರಗತಿಯ ಬಗ್ಗೆ ಜನಮನದಲ್ಲಿ ಜಾಗೃತಿ ಭಾವನೆ ಉಂಟಾಗುವಂತೆ ನಾವು ಕನ್ನಡ ಭಾಷೆಯು ಜನಮನದಲ್ಲಿ ನೆಲೆಗೊಳ್ಳಲು ಶ್ರಮಿಸುತ್ತೇವೆ ಎಂದರು.
ಈ ವೇಳೆ ಹಿರಿಯರಾದ ಭುಜಂಗಸ್ವಾಮಿ ಇನಾಮದಾರ, ಶರಣಪ್ಪ ಬಿನ್ನಾಳ, ಕುಬೇರಪ್ಪ, ಮಲ್ಲೇಶ ಸಜ್ಜನ್, ಪತ್ರಕರ್ತರಾದ ಉಮೇಶ ಪೂಜಾರ್, ಶಿವಕುಮಾರ್ ಹಿರೇಮಠ, ಸಂಘಟಕರಾದ ಮುನೀರ್ ಸಿದ್ದಕಿ, ತಾಜ್‍ಪಾಷಾ ಮಕಾನದಾರ ಸೇರಿದಂತೆ ಇತರರು ಇದ್ದರು. ಸಂಗೀತ ಕಲಾವಿದರಾದ ಮಹಾಂತಯ್ಯ ಸ್ವಾಮಿ ಶಾಸ್ತ್ರಿ ಸ್ವಾಗತಿಸಿ, ನಿರೂಪಿಸಿ, ಕೊನೆಯಲ್ಲಿ ಕೃಷ್ಣ ಸೊರಟೂರು ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್