ಹಿಂದುಳಿದ ವರ್ಗಗಳ ಆಯೋಗ : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ
ರಾಯಚೂರು, 23 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ಗಾಗಿ ಸೆ.22ರಿಂದ ನವೆಂಬರ್ 07ರವರೆಗೆ ಗಣಿತಿದಾರರು ಮನೆಮನೆಗೆ ಭೇಟಿ ನೀಡಿ ಕುಟುಂಬದ ಅಂಕಿ-ಅ0ಶಗಳನ್ನು ಸಂಗ್ರಹಿಸುವರು. ರಾಜ್ಯದ ಎಲ್ಲಾ ವರ್ಗಗಳ
ಹಿಂದುಳಿದ ವರ್ಗಗಳ ಆಯೋಗ : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ


ರಾಯಚೂರು, 23 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ಗಾಗಿ ಸೆ.22ರಿಂದ ನವೆಂಬರ್ 07ರವರೆಗೆ ಗಣಿತಿದಾರರು ಮನೆಮನೆಗೆ ಭೇಟಿ ನೀಡಿ ಕುಟುಂಬದ ಅಂಕಿ-ಅ0ಶಗಳನ್ನು ಸಂಗ್ರಹಿಸುವರು.

ರಾಜ್ಯದ ಎಲ್ಲಾ ವರ್ಗಗಳ/ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅAಶಗಳನ್ನು ಸಂಗ್ರಹಿಸುವುದು. ಅಲ್ಲದೆ ಸಮೀಕ್ಷೆಯಲ್ಲಿ ಅನುಸರಿಸಿದ ಮಾನದಂಡಗಳ ಆಧಾರದ ಮೇಲೆ ಸಂಗ್ರಹಿಸಿದ ಅಂಕಿ-ಅAಶಗಳ ಹಿನ್ನೆಲೆಯಲ್ಲಿ ಎಲ್ಲಾ ಜನಾಂಗದಲ್ಲಿರುವ ದುರ್ಬಲ/ ಹಿಂದುಳಿದವರನ್ನು ಗುರುತಿಸಿ ಅವರ ಅಭಿವೃದ್ಧಿಗಾಗಿ ಕಾರ್ಯಕ್ರಮವನ್ನು ರೂಪಿಸುವುದು ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕಾಗಿ ನವಂಬರ್ 07ರವರೆಗೆ ಗಣತಿದಾರರು ಮನೆಮನೆಗೆ ಭೇಟಿ ನೀಡಿ ಕುಟುಂಬದ ಅಂಕಿ-ಅAಶಗಳನ್ನು ಸಂಗ್ರಹಿಸುವರು ಸಮೀಕ್ಷೆ ಕಾರ್ಯದಲ್ಲಿ ಪ್ರಶ್ನೆಗಳು ಉದ್ಭವಿಸಿದರೆ ಅವುಗಳನ್ನು ಈಗಾಗಲೇ ಮನೆಗಳಿಗೆ ಅಂಟಿಸಿದ ಯುಹೆಚ್‌ಐಡಿ ಸ್ಟೀಕರ್ ಅಳಸಿ ಹೋಗಿದ್ದರೇ/ಕಾಣದೇ ಇದ್ದರೆ ಗಣತಿದಾರರ ಮೊಬೈಲ್ ಆ್ಯಪ್ ಯುಹೆಚ್‌ಐಡಿ ಸಂಖ್ಯೆಗಳು ಲಭ್ಯವಿದ್ದು, (ಯುಹೆಚ್‌ಐಡಿ ಸಂಖ್ಯೆಯು ವಿದ್ಯುತ್ ಮೀಟರ್‌ನ ಆರ್.ಆರ್. ನಂಬರ ಜೊತೆ ಜನರೇಟ್ ಆಗಿರುತ್ತದೆ) ಆ ನಂಬರಗಳಲ್ಲಿ ಸದರಿ ಮನೆಯ ಆರ್.ಆರ್.ಸಂಖ್ಯೆ ಹೊಂದಾಣಿಕೆಯಾಗುವ ಯುಹೆಚ್‌ಐಡಿ ಸಂಖ್ಯೆಯನ್ನು ಉಪಯೋಗಿಸುವುದು. ಮತ್ತು ಈ ಯುಹೆಚ್‌ಐಡಿ ಸಂಖ್ಯೆ ಆಯ್ಕೆ ಮಾಡಿದ ನಂತರ ಆ್ಯಪ್ ನಲ್ಲಿ ಲಭ್ಯವಿರುವ ನೇವಿಗೇಷನ್ ಅದೇ ಮನೆಯ ಲೋಕೆಷನ್ ತೋರಿಸಿದ್ದಲ್ಲಿ ಸದರಿ ಯುಹೆಚ್‌ಐಡಿ ನಂಬರನ್ನು ಆ ಮನೆಯ ಸಮೀಕ್ಷೆಗೆ ಉಪಯೋಗಿಸಬಹುದಾಗಿದೆ.

ಮನೆಗಳಿಗೆ ಯುಹೆಚ್‌ಐಡಿ ನಂಬರ್ ಜನರೇಟ್ ಮಾಡದ ಸಂದರ್ಭದಲ್ಲಿ ಮತ್ತು ಸ್ವೀಕರಿಂಗ್ ಲಗತ್ತಿಸದ ಸಂದರ್ಭದಲ್ಲಿ ಗಣತಿದಾರರ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ಜನರೇಟ್ ಯುಹೆಚ್‌ಐಡಿ ನಂಬರ್ ಆಯ್ಕೆ ಬಳಸಿ ಸಮೀಕ್ಷೆಯನ್ನು ಪೂರ್ಣಗೊಳಿಸಲು ಅವಕಾಶ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಆಯೋಗದ ಸಹಾಯವಾಣಿ ಸಂಖ್ಯೆ: 8050770004ಗೆ ಕರೆ ಮಾಡಬಹುದಾಗಿದೆ. ಅಥವಾ https://kscbc.karnataka.gov.in ಗೆ ಭೇಟಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande