ಗದಗ, 21 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿಯಲ್ಲಿ ನಡೆದ ಏಕಾಂತ ಸಮಾವೇಶದ ಕುರಿತು ಹರಿಹರ ಪೀಠದ ವಚನಾನಂದ ಶ್ರೀಗಳು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ಅದು ಸಂಪೂರ್ಣ ಫ್ಲಾಪ್ ಆಗಿದೆ. ನಮಗೂ, ನಮ್ಮ ಪೀಠಕ್ಕೂ ಆ ಸಮಾವೇಶಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶಕ್ಕೆ ಕೇವಲ ಏಳು ಸಾವಿರ ಜನ ಮಾತ್ರ ಹಾಜರಿದ್ದರು ಎಂದು ಅವರು ಅಂಕಿ-ಅಂಶ ನೀಡಿದರು. “ಇಷ್ಟೊಂದು ಹಣ ಖರ್ಚು ಮಾಡಿ, ಪ್ರಚಾರ ಮಾಡಿದರೂ ಅಲ್ಲಿ ಸೇರಿದವರು ಸಾವಿರಾರು ಅಲ್ಲ; ಕೇವಲ ಏಳು ಸಾವಿರ ಜನ ಮಾತ್ರ. ವೇದಿಕೆಯ ಮೇಲಿದ್ದವರಲ್ಲಿ ಕೆಲವರು ಮಾತ್ರ ಸ್ವಾಮೀಜಿಗಳು, ಉಳಿದವರು ಊರ ಪುರೋಹಿತರೇ” ಎಂದು ಟೀಕಿಸಿದರು.
ಸಮಾವೇಶದಲ್ಲಿ ಯಾವುದೇ ಸ್ಪಷ್ಟ ಸಂದೇಶವಿಲ್ಲದೆ ಗೊಂದಲವೇ ಗೊಂದಲ ಆವರಿಸಿತ್ತು ಎಂದು ವಚನಾನಂದ ಶ್ರೀಗಳು ಹೇಳಿದರು. “ಅದಕ್ಕಿಂತಲೂ ಬಸವ ಸಂಸ್ಕೃತಿ ಯಾತ್ರೆ ಬಹಳ ಯಶಸ್ವಿಯಾಗಿ ನಡೆದುತ್ತಿದೆ. 20 ಜಿಲ್ಲೆಗಳಲ್ಲಿ ಸಾವಿರಾರು ಜನರು ಭಾಗವಹಿಸುತ್ತಿದ್ದಾರೆ. ಜನರ ನಿಜವಾದ ಸ್ಪಂದನೆ ಅಲ್ಲಿ ಕಾಣಿಸಿದೆ” ಎಂದು ವಿವರಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP