ನವದೆಹಲಿ, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತದ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಜಾಗತಿಕ ಮಟ್ಟದಲ್ಲಿ ದಿಕ್ಕು ತೋರಿಸಲು ಆಯೋಜಿಸಲಾಗಿರುವ ಸೆಮಿಕಾನ್ ಇಂಡಿಯಾ-2025 ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಮೂರೂ ದಿನಗಳ ಕಾಲ ನಡೆಯುವ ಈ ಮಹಾಸಮ್ಮೇಳನದಲ್ಲಿ 48 ದೇಶಗಳಿಂದ 2,500 ಪ್ರತಿನಿಧಿಗಳು, 20,750 ಕ್ಕೂ ಹೆಚ್ಚು ಸ್ಪರ್ಧಿಗಳು, 50 ಜಾಗತಿಕ ನಾಯಕರು ಸೇರಿದಂತೆ 150 ಭಾಷಣಕಾರರು ಮತ್ತು 350 ಕ್ಕೂ ಹೆಚ್ಚು ಪ್ರದರ್ಶಕರು ಭಾಗಿಯಾಗುತ್ತಿದ್ದಾರೆ.
ಸಮ್ಮೇಳನದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಮತ್ತು ಮುಂದುವರಿದ ಪ್ಯಾಕೇಜಿಂಗ್ ಯೋಜನೆಗಳು, ಮೂಲಸೌಕರ್ಯ ಸಿದ್ಧತೆ, ಸ್ಮಾರ್ಟ್ ಉತ್ಪಾದನೆ, ಸಂಶೋಧನೆ-ಅಭಿವೃದ್ಧಿ, AI ನವೀನತೆ, ಹೂಡಿಕೆ ಅವಕಾಶಗಳು, ರಾಜ್ಯ ನೀತಿ ಅನುಷ್ಠಾನ, ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯ ಬೆಳವಣಿಗೆ ಮತ್ತು ಅಂತರರಾಷ್ಟ್ರೀಯ ಸಹಯೋಗಗಳು ಕುರಿತು ವಿಶೇಷ ಅಧಿವೇಶನಗಳು ನಡೆಯಲಿವೆ.
ಭಾರತವನ್ನು ಸೆಮಿಕಂಡಕ್ಟರ್ ವಿನ್ಯಾಸ, ಉತ್ಪಾದನೆ ಮತ್ತು ತಂತ್ರಜ್ಞಾನ ಕೇಂದ್ರವಾಗಿ ತೋರಿಸಲು, ಈ ಮೊದಲು 2022 ರಲ್ಲಿ ಬೆಂಗಳೂರಿನಲ್ಲಿ, 2023 ರಲ್ಲಿ ಗಾಂಧಿನಗರದಲ್ಲಿ ಹಾಗೂ 2024 ರಲ್ಲಿ ಗ್ರೇಟರ್ ನೋಯ್ಡಾದಲ್ಲಿ ಸೆಮಿಕಾನ್ ಸಮ್ಮೇಳನಗಳನ್ನು ಆಯೋಜಿಸಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa