ವಿಜಯಪುರ, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಸಕ್ತ ಸಾಲಿನ ವಿಶ್ವ ಕೌಶಲ್ಯ ಸ್ಪರ್ಧೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ವಿಶ್ವದ ಅತಿ ದೊಡ್ಡ ವೃತ್ತಿಪರ ಕೌಶಲ್ಯ ಸ್ಪರ್ದೆಯಾಗಿದೆ. ೭೫ ಕ್ಕೂ ಹೆಚ್ಚು ದೇಶಗಳಿಂದ ೧೦೦೦ಕ್ಕೂ ಹೆಚ್ಚು ಅಧಿಕ ಕೌಶಲ್ಯಯುತ ಯುವಜನತೆ (೧೬-೨೫ ವರ್ಷದ ವಯಸ್ಸಿನವರು) ೬೩ ವಿವಿಧ ಕೌಶಲ್ಯ ವಿಭಾಗಗಳಲ್ಲಿ ಭಾಗವಹಿಸಿ ತಮ್ಮ ಕೌಶಲ್ಯ ಶ್ರೇಷ್ಠತೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುತ್ತಾರೆ.
ವಿಶ್ವ ಕೌಶಲ್ಯ ಸ್ಪರ್ದೆ ೨೦೨೬ರ ಚೀನಾದ ಶಾಂಘೈ ನಗರದಲ್ಲಿ ನಡೆಯಲಿದೆ. ಸ್ಪರ್ಧೆಯ ಭಾಗವಾಗಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆ.ಎಸ್.ಡಿ.ಸಿ) ಕರ್ನಾಟಕ ರಾಜ್ಯ ಒಲಿಂಪಿಕ್ಸ್ ೨೦೨೫ ಅನ್ನು ಪ್ರಾರಂಭಿಸಿದೆ. ಈ ಸ್ಪರ್ದೆಯ ವಿಜೇತರಿಗೆ ಉನ್ನತ ಮಟ್ಟದಲ್ಲಿ ತರಬೇತಿ ಮತ್ತು ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅವರು ಅವಕಾಶವನ್ನು ಪಡೆಯಲ್ಲಿದ್ದಾರೆ. ಪ್ರಸ್ತುತ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಯಾವುದೇ ವಿದ್ಯಾರ್ಹತೆಯ ಅವಶ್ಯಕತೆ ಇರುವುದಿಲ್ಲ.
ಇಂಡಿಯಾ ಸ್ಕಿಲ್ ಕಾಂಪಿಟೇಶನ್ ೨೦೨೫ರ ಸ್ಪರ್ದೆಯ ಕುರಿತು ಸಂಪೂರ್ಣ ಮಾಹಿತಿಗಾಗಿ ಭೇಟಿ ನೀಡಿ ಸೆಪ್ಟೆಂಬರ ೩೦ ರೊಳಗಾಗಿ ಹೆಸರು ನೋಂದಾಯಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಆಡಳಿತ ಭವನ, ೧ನೇ ಮಹಡಿ ಕೊಠಡಿ ಸಂಖ್ಯೆ.೧೧೮, ನವನಗರ, ಬಾಗಲಕೋಟೆ ಮೊನಂ.೯೬೦೬೪೯೨೨೧೬, ೭೦೧೯೪೪೧೮೨೮ಗೆ ಸಮಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande