ಕೊಪ್ಪಳ, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ನಿಮಿತ್ಯ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ರೀಡೆ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಪುರುಷರ ಕ್ರೀಡಾ ವಿಭಾಗದಲ್ಲಿ 60 ರಿಂದ 70 ವರ್ಷ ವಯೋಮಿತಿಯ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಗೋಪಾಲ ರಾವ್ ಪ್ರಥಮ, ಲಿಂಗಪ್ಪ ಎಮ್ಮಿಗುಡ್ಡ ದ್ವಿತೀಯ ಹಾಗೂ ಜಿ.ಡಿ. ಪಾಟೀಲ್ ತೃತೀಯ ಸ್ಥಾನ ಪಡೆದಿದ್ದಾರೆ. ಬಿರುಸಿನ ನಡಿಗೆ ಸ್ಪರ್ಧೆಯಲ್ಲಿ 60 ರಿಂದ 69 ವರ್ಷ ವಯೋಮಿತಿ ವಿಭಾಗದಲ್ಲಿ ಲಿಂಗಪ್ಪ ಎಮ್ಮಿಗುಡ್ಡ ಪ್ರಥಮ, ರಾಜಶೇಖರ ಶೆಟ್ಟರ್ ದ್ವಿತೀಯ ಹಾಗೂ ರಾಯನಗೌಡ್ರ ಕೆ.ಆಡೂರ ತೃತೀಯ ಸ್ಥಾನ ಪಡೆದಿದ್ದಾರೆ. 70 ವರ್ಷ ಹಾಗೂ ಮೇಲ್ಪಟ್ಟವರ ವಿಭಾಗದಲ್ಲಿ ನಿಂಗಪ್ಪ ಲೇಬಗೇರಿ ಪ್ರಥಮ, ಜೆ. ಶರಣಪ್ಪ ಕುಷ್ಟಗಿ ದ್ವಿತೀಯ ಹಾಗೂ ವಾಸಪ್ಪ ಬೈರಾಪೂರ ತೃತೀಯ ಸ್ಥಾನ ಪಡೆದಿದ್ದಾರೆ. ಬಕೆಟ್ ಬಾಲ್ ಸ್ಪರ್ಧೆಯಲ್ಲಿ 60 ರಿಂದ 69 ವರ್ಷ ವಯೋಮಿತಿ ವಿಭಾಗದಲ್ಲಿ ಲಿಂಗಪ್ಪ ಎಮ್ಮಿಗುಡ್ಡ ಪ್ರಥಮ, ಚಿದಾನಂದಪ್ಪ ಕಂದಗಲ್ ದ್ವಿತೀಯ ಹಾಗೂ ರಾಯನಗೌಡ ಕೆ.ಆಡೂರ ತೃತೀಯ ಸ್ಥಾನ ಪಡೆದಿದ್ದಾರೆ. 70 ವರ್ಷ ಹಾಗೂ ಮೇಲ್ಪಟ್ಟವರ ವಿಭಾಗದಲ್ಲಿ ಬಸಪ್ಪ ಗುಮಗೇರಿ ಪ್ರಥಮ, ಹನುಮಂತಪ್ಪ ಮದ್ದಾಪುರ ದ್ವಿತೀಯ ಹಾಗೂ ಶಿವಪ್ಪ ಬಿಸರಳ್ಳಿ ತೃತೀಯ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ಕ್ರೀಡಾ ವಿಭಾಗದಲ್ಲಿ 60 ರಿಂದ 70 ವರ್ಷ ವಯೋಮಿತಿಯ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಶಾರದಾ ಬಡಿಗೇರ ಪ್ರಥಮ, ವಿಮಲಾಬಾಯಿ ದ್ವಿತೀಯ ಹಾಗೂ ಲಲಿತಾ ದೇಸಾಯಿ ತೃತೀಯ ಸ್ಥಾನ ಪಡೆದಿದ್ದಾರೆ. ಬಿರುಸಿನ ನಡಿಗೆ ಸ್ಪರ್ಧೆಯಲ್ಲಿ 60 ರಿಂದ 69 ವರ್ಷ ವಯೋಮಿತಿ ವಿಭಾಗದಲ್ಲಿ ಲಕ್ಷ್ಮೀದೇವಿ ಗುಮಗೇರಿ ಪ್ರಥಮ, ದ್ರಾಕ್ಷಾಯಿಣಿ ಜಿ. ಗದಗ ದ್ವಿತೀಯ ಹಾಗೂ ಸುಮಂಗಳಾ ಹಂಚಿನಾಳ ತೃತೀಯ ಸ್ಥಾನ ಪಡೆದಿದ್ದಾರೆ. 70 ವರ್ಷ ಹಾಗೂ ಮೇಲ್ಪಟ್ಟವರ ವಿಭಾಗದಲ್ಲಿ ಲಲಿತಾ ದೇಸಾಯಿ ಪ್ರಥಮ, ವಿಮಲಾಬಾಯಿ ಕೊಡೆ ದ್ವಿತೀಯ ಹಾಗೂ ರಾಧಾ ಕೆ.ಕುಲಕರ್ಣಿ ತೃತೀಯ ಸ್ಥಾನ ಪಡೆದಿದ್ದಾರೆ. ಬಕೆಟ್ ಬಾಲ್ ಸ್ಪರ್ಧೆಯಲ್ಲಿ 61 ರಿಂದ 69 ವರ್ಷ ವಯೋಮಿತಿ ವಿಭಾಗದಲ್ಲಿ ಸುಮಂಗಳಾ ಗುಂಜಾಳ ಪ್ರಥಮ, ಲಕ್ಷ್ಮೀದೇವಿ ಗುಮಗೇರಿ ದ್ವಿತೀಯ ಹಾಗೂ ದ್ರಾಕ್ಷಾಯಿಣಿ ಜಿ.ಗದಗ ತೃತೀಯ ಸ್ಥಾನ ಪಡೆದಿದ್ದಾರೆ. 70 ವರ್ಷ ಹಾಗೂ ಮೇಲ್ಪಟ್ಟವರ ವಿಭಾಗದಲ್ಲಿ ನೀಲಮ್ಮ ಪ್ರಥಮ, ಹುಲಿಗೆಮ್ಮ ಸಿಂಧೋಗಿ ದ್ವಿತೀಯ ಹಾಗೂ ಲಲಿತಾ ದೇಸಾಯಿ ತೃತೀಯ ಸ್ಥಾನ ಪಡೆದಿದ್ದಾರೆ.
ಪುರುಷರ ಸಾಂಸ್ಕ್ರತಿಕ ಸ್ಪರ್ಧೆ ವಿಭಾಗದಲ್ಲಿ ಗಾಯನ ಸ್ಪರ್ಧೆಯ 60 ರಿಂದ 69 ವರ್ಷ ವಯೋಮಿತಿಯ ವಿಭಾಗದಲ್ಲಿ ತೊಂಡೆಪ್ಪ ಕನಕಗಿರಿ ಪ್ರಥಮ, ನಿಂಗಪ್ಪ ಸಜ್ಜನ ದ್ವಿತೀಯ ಹಾಗೂ ರಂಗನಾಥ ತೃತೀಯ ಸ್ಥಾನ ಪಡೆದಿದ್ದಾರೆ. 70 ವರ್ಷ ಹಾಗೂ ಮೇಲ್ಪಟ್ಟವರ ವಿಭಾಗದಲ್ಲಿ ನಿಂಗಪ್ಪ ಲೇಬಗೇರಿ ಪ್ರಥಮ, ಜೆ. ಶರಣಪ್ಪ ಕುಷ್ಟಗಿ ದ್ವಿತೀಯ ಹಾಗೂ ಮಲ್ಲಪ್ಪ ಕುರಿ ತೃತೀಯ ಸ್ಥಾನ ಪಡೆದಿದ್ದಾರೆ. ಏಕ ಪಾತ್ರಾಭಿನಯ ಸ್ಪರ್ಧೆಯಲ್ಲಿ 60 ರಿಂದ 69 ವರ್ಷ ವಯೋಮಿತಿ ವಿಭಾಗದಲ್ಲಿ ಮಲಕೇಶ ಕೋಟೆ ಕನಕಗಿರಿ ಪ್ರಥಮ, ಹನುಮಂತಪ್ಪ ಎಲಿಗಾರ ದ್ವಿತೀಯ ಹಾಗೂ ನಿಂಗಪ್ಪ ಸಜ್ಜನ ತೃತೀಯ ಸ್ಥಾನ ಪಡೆದಿದ್ದಾರೆ. 70 ವರ್ಷ ಹಾಗೂ ಮೇಲ್ಪಟ್ಟವರ ವಿಭಾಗದಲ್ಲಿ ನಿಂಗಪ್ಪ ಲೇಬಗೇರಿ ಪ್ರಥಮ, ಷಣ್ಮುಕಪ್ಪ ಭೂತಣನವರ ದ್ವಿತೀಯ ಹಾಗೂ ಮಲ್ಲಪ್ಪ ಕುರಿ ತೃತೀಯ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ಸಾಂಸ್ಕ್ರತಿಕ ಸ್ಪರ್ಧೆ ವಿಭಾಗದಲ್ಲಿ ಗಾಯನ ಸ್ಪರ್ಧೆಯ 61 ರಿಂದ 69 ವರ್ಷ ವಯೋಮಿತಿಯ ವಿಭಾಗದಲ್ಲಿ ಅನ್ನಪೂರ್ಣ ರಾಚೋಟಿ ಪ್ರಥಮ, ಸುಮಂಗಳಾ ಹಂಚಿನಾಳ ದ್ವಿತೀಯ ಹಾಗೂ ದ್ರಾಕ್ಷಾಯಿಣಿ ಜಿ. ಗದಗ ತೃತೀಯ ಸ್ಥಾನ ಪಡೆದಿದ್ದಾರೆ. 70 ವರ್ಷ ಹಾಗೂ ಮೇಲ್ಪಟ್ಟವರ ವಿಭಾಗದಲ್ಲಿ ಮಲ್ಲಮ್ಮ ಪ್ರಥಮ, ಹಾಲಮ್ಮ ಹಿರೇಮಠ ದ್ವಿತೀಯ ಹಾಗೂ ಹುಲಿಗೆಮ್ಮ ತೃತೀಯ ಸ್ಥಾನ ಪಡೆದಿದ್ದಾರೆ.
ಅಕ್ಟೋಬರ್ 10 ರಂದು ಜಿಲ್ಲಾ ಮಟ್ಟದಲ್ಲಿ ನಡೆಯುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ವೇದಿಕೆ ಕಾರ್ಯಕ್ರಮದಲ್ಲಿ ಕ್ರೀಡಾ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಲಾಗುವುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್