ಸೋಲಾರ್ ಕೂಲ್ ಕಾರ್ಟ್‍ಗೆ ಸಚಿವರ ಚಾಲನೆ
ರಾಯಚೂರು, 19 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಸೆಲ್ಕೋ ಫೌಂಡೇಶನ್‍ನ ಸಹಭಾಗಿತ್ವದ ಸೋಲಾರ್ ಕೂಲ್ ಕಾರ್ಟ್‍ಗಳನ್ನು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ
ಸೋಲಾರ್ ಕೂಲ್ ಕಾರ್ಟ್‍ಗೆ ಸಚಿವರಿಂದ ಚಾಲನೆ


ರಾಯಚೂರು, 19 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಸೆಲ್ಕೋ ಫೌಂಡೇಶನ್‍ನ ಸಹಭಾಗಿತ್ವದ ಸೋಲಾರ್ ಕೂಲ್ ಕಾರ್ಟ್‍ಗಳನ್ನು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಫಲಾನುಭವಿಗಳಿಗೆ ವಿತರಿಸಿದರು.

ನವೀಕರಣಗೊಂಡ ರಾಯಚೂರ ನಗರದಲ್ಲಿನ ನಗರ ಕೇಂದ್ರ ಗ್ರಂಥಾಲಯ ಕಟ್ಟಡದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಬ್ಬನ್ ಕತ್ತರಿಸಿ ಸೋಲಾರ್ ಕೂಲ್ ಕಾರ್ಟ್‍ಗಳಿಗೆ ಚಾಲನೆ ನೀಡಿದ ಸಚಿವರು, ಇದೆ ವೇಳೆ ಅವುಗಳ ಬಳಕೆ ಮತ್ತು ಸೋಲಾರ್ ಕೂಲ್ ಕಾರ್ಟ್‍ಗಳಲ್ಲಿನ ತರಕಾರಿ ಮಾರಾಟದಿಂದ ಆಗುವ ಲಾಭ ನಷ್ಟಗಳ ಬಗ್ಗೆ ಸಚಿವರು ಫಲಾನುಭವಿಗಳಿಗೆ ವಿಚಾರಿಸಿ ಮಾಹಿತಿ ಪಡೆದುಕೊಂಡರು.

ಈ ಸೋಲಾರ್ ಕೂಲ್ ಕಾರ್ಟ್‍ಗಳು ಸೌರ ಬ್ಯಾಟರಿ ಮತ್ತು ಸೌರ ಪ್ರತಿಫಲಕ ಫಿಟ್ಟಿಂಗ್‍ಗಳೊಂದಿಗೆ ಬರುತ್ತವೆ. ಹಣ್ಣುಗಳು ಮತ್ತು ತರಕಾರಿಗಳ ಜೀವಿತಾವಧಿಯನ್ನು ಶೇಕಡಾ 70 ರಷ್ಟು ಹೆಚ್ಚಿಸುತ್ತವೆ. ರಾಯಚೂರಿನಲ್ಲಿ ಬಿಸಿ ವಾತಾವರಣದಲ್ಲಿ ಹಣ್ಣುಗಳು, ಹೂವುಗಳು ಮತ್ತು ತರಕಾರಿಗಳು ವಿಶೇಷವಾಗಿ ಬೇಸಿಗೆಯಲ್ಲಿ ಬಹಳ ಬೇಗನೆ ಕೆಡುವ ಅಥವಾ ಹಳಸುವ ಬೀತಿಯಿದ್ದು, ಈ ಸಮಸ್ಯೆಯನ್ನು ನಿವಾರಿಸಲು ಕೂಲ್ ಕಾರ್ಟ್ ಸಹಾಯವಾಗುತ್ತದೆ ಎಂದು ಇದೆ ವೇಳೆ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಸಚಿವರಿಗೆ ಮಾಹಿತಿ ನೀಡಿದರು.

ಈ ಹೊಸ ಪ್ರಯೋಗವು ಮುಂದಿನ 1 ರಿಂದ 2 ತಿಂಗಳವರೆಗೆ ಯಶಸ್ವಿಯಾದರೆ ಮಹಾನಗರ ಪಾಲಿಕೆಯ ವ್ಯಾಪ್ತಿಯ ಆಸಕ್ತ ಬೀದಿ ವ್ಯಾಪಾರಿಗಳಿಗೆ ಈ ಹೊಸ ಕೂಲ್ ಕಾರ್ಟ್‍ಗಳನ್ನು ಖರೀದಿಸಲು ಸಹಾಯ ಧನ ಮತ್ತು ಅಗ್ಗದ ಸಾಲಗಳನ್ನು ಒದಗಿಸಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು,

ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಪಾಲಿಕೆಯ ಹಿರಿಯ ಸದಸ್ಯ ಜಯಣ್ಣ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ, ರಾಯಚೂರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಈರಣ್ಣ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರಸ್ವಾಮಿ, ಪಾಲಿಕೆ ಆಡಳಿತ ಉಪ ಆಯುಕ್ತರಾದ ಸಂತೋಷ ರಾಣಿ ಸೇರಿದಂತೆ ಇನ್ನೀತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande