ಸಿಂಧೋಳ ಸಮುದಾಯದ ಅಲೆಮಾರಿ ಮಹಿಳೆಯರು, ಮಾಜಿ ದೇವದಾಸಿ ಮಹಿಳೆಯರೊಂದಿಗೆ ಸಂವಾದ
ರಾಯಚೂರು, 19 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸಿಂಧನೂರ, ಮಸ್ಕಿ ನಗರ ಸೇರಿದಂತೆ ತಾಲೂಕು ವ್ಯಾಪ್ತಿಯ ಎಲ್ಲ ಕ್ಯಾಂಪಗಳಲ್ಲಿ, ಹಳ್ಳಿಗಳಲ್ಲಿ ಅಲೆಮಾರಿ, ಅರೆ ಅಲೆಮಾರಿ ಸೇರಿದಂತೆ ಎಲ್ಲ ಮಹಿಳೆಯರ ಹಾಗೂ ಮಾಜಿ ದೇವದಾಸಿ ಮಹಿಳೆಯರನ್ನು ಸೇರಿಸಿ ಮಹಿಳಾ ಗ್ರಾಮ ಸಭೆಗಳನ್ನು ನಡೆಸಬೇಕು. ಆ ಸಭೆಗಳಲ್ಲಿ ಮಹ
ಸಿಂಧೋಳ ಸಮುದಾಯದ ಅಲೆಮಾರಿ ಮಹಿಳೆಯರು, ಮಾಜಿ ದೇವದಾಸಿ ಮಹಿಳೆಯರೊಂದಿಗೆ ಸಂವಾದ


ರಾಯಚೂರು, 19 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಿಂಧನೂರ, ಮಸ್ಕಿ ನಗರ ಸೇರಿದಂತೆ ತಾಲೂಕು ವ್ಯಾಪ್ತಿಯ ಎಲ್ಲ ಕ್ಯಾಂಪಗಳಲ್ಲಿ, ಹಳ್ಳಿಗಳಲ್ಲಿ ಅಲೆಮಾರಿ, ಅರೆ ಅಲೆಮಾರಿ ಸೇರಿದಂತೆ ಎಲ್ಲ ಮಹಿಳೆಯರ ಹಾಗೂ ಮಾಜಿ ದೇವದಾಸಿ ಮಹಿಳೆಯರನ್ನು ಸೇರಿಸಿ ಮಹಿಳಾ ಗ್ರಾಮ ಸಭೆಗಳನ್ನು ನಡೆಸಬೇಕು. ಆ ಸಭೆಗಳಲ್ಲಿ ಮಹಿಳೆಯರ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕ್ರಮಗಳ ಜರುಗಿಸಿದ ಬಗ್ಗೆ ಮಹಿಳಾ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಹೇಳಿದರು.

ಸೆ.18ರಂದು, ಸಿಂಧನೂರ ನಗರದ ಸುಕ್ಕಲಪೇಟೆ ರಸ್ತೆಯಲ್ಲಿರುವ ಟೌನ್ ಹಾಲದಲ್ಲಿ ಸಿಂದೋಳ ಸಮುದಾಯದ ಅಲೆಮಾರಿ ಮಹಿಳೆಯರು ಮತ್ತು ದೇವದಾಸಿ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿಂಧನೂರ ನಗರ ಸೇರಿದಂತೆ ಸಿಂಧನೂರ, ಮಸ್ಕಿ, ಮಾನವಿ ತಾಲೂಕುಗಳ ವ್ಯಾಪ್ತಿಯಲ್ಲಿನ ಅನೇಕ ಗ್ರಾಮಗಳು, ಕ್ಯಾಂಪಗಳಲ್ಲಿನ ಅನೇಕ ವಯೋವೃದ್ಧೆಯರು ಈಗಲು ಸಹ ಮಾಸಿಕ ವೃದ್ಯಾಪ್ಯದ ಹಳೆಯ ವೇತನ ಪಡೆಯುತ್ತಿದ್ದು, ಅವರಿಗೆ ಪರಿಷ್ಕøತ ಈಗಿನ ವೇತನ ಸಿಗುವಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ದೇವದಾಸಿಯರಿಂದ ಮನವಿ: ಬಹುವರ್ಷಗಳಿಂದ ನಮಗೆ ಮನೆ ಇಲ್ಲ. ನಿವೇಶನ ಇಲ್ಲ ಎಂದು ಸಿಂಧನೂರ ನಗರದ ಸ್ಥಳೀಯ ಮತ್ತು ಸುತ್ತಲಿನ ಅನೇಕ ಕ್ಯಾಂಪಗಳಲ್ಲಿನ ಮಾಜಿ ದೇವದಾಸಿ ಮಹಿಳೆಯರು ಕಾರ್ಯಕ್ರಮದಲ್ಲಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಈ ವೇಳೆ ಅಧ್ಯಕ್ಷರು, ವೇದಿಕೆಗೆ ನಗರಸಭೆ ಆಯುಕ್ತರನ್ನು ಕರೆದು ಮಾಜಿ ದೇವದಾಸಿ ಮಹಿಳೆಯರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಸಿಂಧನೂರ ನಗರಸಭೆ ವ್ಯಾಪ್ತಿಯಲ್ಲಿ ಇದುವರೆಗೆ ನಿವೇಶನ ಪಡೆಯದ ಮಾಜಿ ದೇವದಾಸಿ ಮಹಿಳೆಯರು ನಗರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಕಾನೂನಿನಲ್ಲಿ ಅವಕಾಶವಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಸಿಂಧನೂರ ನಗರಸಭೆ ಆಯುಕ್ತರಾದ ಪಾಂಡುರಂಗ ಅವರು ತಿಳಿಸಿದರು.

ಮಹಿಳೆಯರಿಗೆ ಸಲಹೆ: ಕ್ಯಾಂಪಗಳಲ್ಲಿ, ಜಮೀನು ಇಲ್ಲ, ರಸ್ತೆ ಇಲ್ಲ, ಪೆನ್ಶನ್ ನೀಡುತ್ತಿಲ್ಲ ಎನ್ನುವಂತಹ ಏನೇ ಸಮಸ್ಯೆಗಳಿದ್ದರೂ ಅಲ್ಲಿನ ಮಹಿಳೆಯರು ಅವುಗಳ ಪಟ್ಟಿ ಮಾಡಿ ನೀಡಬೇಕು. ಮಹಿಳೆಯರಿಗೆ ಸಂಬಂಧಿಸಿದ ಅಹವಾಲುಗಳನ್ನು ಆಯೋಗಕ್ಕೆ ಸಲ್ಲಿಸಿದಲ್ಲಿ ನಿಯಮಾನುಸಾರ ಪರಿಶೀಲಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗೆ ಕಳಿಸಿ ಸ್ಪಂದನೆ ನೀಡುವೆ ಎಂದು ತಿಳಿಸಿದರು.

ಅಲೆಮಾರಿಗಳು, ಅರೆ ಅಲೆಮಾರಿಗಳ ಸಮುದಾಯದಲ್ಲಿ ಜಾಗದ ಸಮಸ್ಯೆ ಇದ್ದಲ್ಲಿ ಅದು ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ತಾವುಗಳು ಪರಿಹಾರಕ್ಕಾಗಿ ತಹಸೀಲ್ದಾರ ಮತ್ತು ಜಿಲ್ಲಾಧಿಕಾರಿಗಳ ಬಳಿಯಲ್ಲಿ ಮನವಿ ಸಲ್ಲಿಸಬೇಕು ಎಂದು ಸಲಹೆ ಮಾಡಿದರು.

ನಾನಾ ಗ್ರಾಮಸ್ಥರು ಭಾಗಿ: ಟೌನಹಾಲನಲ್ಲಿ ನಡೆದ ಸಂವಾದದಲ್ಲಿ ಸಿಂಧನೂರ ನಗರ, ಸುತ್ತಲಿನ ಹೊಸಳ್ಳಿ, ಶಾಸಲಮರಿ, ಯೋಳರಾಗಿ ಕ್ಯಾಂಪ್, ಗ್ವಾಮರಿಸಿ, ಜಾಲಹಳ್ಳಿ ಸೇರಿದಂತೆ ಬೇರೆ ಬೇರೆ ಗ್ರಾಮ, ಕ್ಯಾಂಪನ ಮಹಿಳೆಯರು, ಮಾಜಿ ದೇವದಾಸಿ ಮಹಿಳೆಯರು ಭಾಗಿಯಾಗಿದ್ದರು.

ಡೋಲು, ಹಲಗೆ ಬಾರಿಸಿ ಸ್ವಾಗತಿಸಿದರು: ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರು, ಬೆಳಗ್ಗೆ ಸಿಂಧನೂರ ನಗರಕ್ಕೆ ಪ್ರವೇಶ ಮಾಡುತ್ತಿದ್ದಂತೆ ಸಿಂದೋಲ ಸಮುದಾಯದ ಮಹಿಳೆಯರು ಮತ್ತು ಪುರುಷರು ಡೋಲು, ಹಲಗೆ ಬಾರಿಸಿ, ಬಾರಕೋಲ ಬೀಸಿ ಅದ್ದೂರಿ ಸ್ವಾಗತ ಕೋರಿದರು. ಟೌನ್ ಹಾಲವರೆಗೆ ಮೆರವಣಿಗೆಯಲ್ಲಿ ಕರೆತಂದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ತಾಲೂಕು ಪೆÇಲೀಸ್ ಇಲಾಖೆ, ಸಿಂಧನೂರ ಹಾಗೂ ತುರವಿಹಾಳ ಶಿಶು ಅಭಿವೃದ್ಧಿ ಕಾರ್ಯಾಲಯ ಮತ್ತು ಸಿಂಧನೂರ ತಾಲೂಕು ಇಂದಿರಾಗಾಂಧಿ ಸ್ತ್ರಿ ಶಕ್ತಿ ಒಕ್ಕೂಟದ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು.

ಸಮಾರಂಭದಲ್ಲಿ ತಹಸೀಲ್ದಾರ ಅರುಣಕುಮಾರ ದೇಸಾಯಿ, ಸಿಡಿಪಿಓಗಳಾದ ಅಶೋಕ, ಲಿಂಗನಗೌಡ್ರ ಸೇರಿದಂತೆ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande