ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಶಿವರಾಜ್ ಸಿಂಗ್ ಚೌಹಾಣ್
ನವದೆಹಲಿ, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, 1992-93 ರ ಏಕತಾ ಯಾತ್ರೆ ವೇಳೆ ತಮ್ಮ ಮೊದಲ ಭೇಟಿಯ ನೆನಪನ್ನು ಹಂಚಿಕೊಂಡಿದ್ದಾರೆ. ಅವರು ಎಕ್ಸನಲ್ಲಿ ಹಂಚಿಕೊಂಡ ಸಂದೇಶದಲ್ಲಿ, ಕಾಶ್ಮೀರದಲ್ಲಿ
Chawan


ನವದೆಹಲಿ, 17 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, 1992-93 ರ ಏಕತಾ ಯಾತ್ರೆ ವೇಳೆ ತಮ್ಮ ಮೊದಲ ಭೇಟಿಯ ನೆನಪನ್ನು ಹಂಚಿಕೊಂಡಿದ್ದಾರೆ.

ಅವರು ಎಕ್ಸನಲ್ಲಿ ಹಂಚಿಕೊಂಡ ಸಂದೇಶದಲ್ಲಿ, ಕಾಶ್ಮೀರದಲ್ಲಿ ಭಯೋತ್ಪಾದನೆ ತೀವ್ರವಾಗಿದ್ದ ಸಂದರ್ಭದಲ್ಲೇ ಡಾ. ಮುರಳಿ ಮನೋಹರ್ ಜೋಶಿ ನೇತೃತ್ವದಲ್ಲಿ ನಡೆದ ಏಕತಾ ಯಾತ್ರೆಯ ಜವಾಬ್ದಾರಿ ಮೋದಿಗೆ ನೀಡಲಾಗಿತ್ತು ಎಂದು ಸ್ಮರಿಸಿದರು.

“ನಾನು ಕೇಸರಿಯಾ ದಳದ ಸಂಚಾಲಕನಾಗಿ ಯಾತ್ರೆಗೆ ಜೋಡಿಸಿಕೊಂಡಾಗ ಮೊದಲ ಬಾರಿಗೆ ಮೋದಿ ಅವರನ್ನು ಭೇಟಿಯಾದೆ. ಜನರನ್ನು ಒಗ್ಗೂಡಿಸಲು, ಉಪ-ಯಾತ್ರೆಗಳ ಕಲ್ಪನೆಯನ್ನು ಅವರು ಸೂಚಿಸಿದರು. ಅವರಲ್ಲಿ ಅಪಾರ ದೃಢಸಂಕಲ್ಪ, ಶಾಂತಿ ಮತ್ತು ತಾಳ್ಮೆಯನ್ನು ಕಂಡೆ” ಎಂದು ಹೇಳಿದರು.

ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸುವ ನೆನಪನ್ನು ಚೌಹಾಣ್ ಹಂಚಿಕೊಂಡು, “ಆ ದಿನ ಮೋದಿ ಭಾವುಕರಾಗಿ ಕಣ್ಣೀರಿಟ್ಟರು. ಹೊರಗಿನಿಂದ ಕಠಿಣವಾಗಿ ಕಾಣುವ ಅವರು ಅಂತರಂಗದಲ್ಲಿ ಅತಿ ಮೃದು ಹೃದಯಿ” ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande