ಕತ್ರಾ, 17 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಪರ್ವತಗಳ ಮೇಲಿರುವ ಮಾತಾ ವೈಷ್ಣೋದೇವಿ ದೇವಸ್ಥಾನದ ಯಾತ್ರೆ 22 ದಿನಗಳ ಬಳಿಕ ಬುಧವಾರದಿಂದ ಪುನರಾರಂಭವಾಯಿತು.
ಆಗಸ್ಟ್ 26 ರಂದು ಸಂಭವಿಸಿದ ಭೀಕರ ಭೂಕುಸಿತದಲ್ಲಿ 34 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದರು. ಈ ಕಾರಣಕ್ಕೆ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.
ಬೆಳಿಗ್ಗೆ 6 ಗಂಟೆಗೆ ಬನಗಂಗಾ ದ್ವಾರದಿಂದ ಯಾತ್ರೆ ಮರು ಪ್ರಾರಂಭವಾಗಿದ್ದು, ಕತ್ರಾ ಶಿಬಿರದಲ್ಲಿ ತಂಗಿದ್ದ ಸಾವಿರಾರು ಭಕ್ತರಲ್ಲಿ ಅಪಾರ ಉತ್ಸಾಹ ಮೂಡಿತು. ಭಕ್ತರು ಭಾರಿ ಸಂಖ್ಯೆಯಲ್ಲಿ ಸೇರಿಕೊಂಡು ಧ್ವಜಾರೋಹಣದ ನಡುವೆ ಪರ್ವತದ ಮಾರ್ಗಗಳನ್ನು ಹತ್ತಿದರು.
ದೇವಾಲಯ ಮಂಡಳಿ ಯಾತ್ರಿಕರಿಗೆ ಮಾನ್ಯ ಗುರುತಿನ ಚೀಟಿ, ನಿಗದಿತ ಮಾರ್ಗ ಪಾಲನೆ, ಸಿಬ್ಬಂದಿಯ ಮಾರ್ಗದರ್ಶನಕ್ಕೆ ಸಹಕಾರ ನೀಡುವಂತೆ ಸೂಚಿಸಿದೆ. ಭಕ್ತರ ಪತ್ತೆಹಚ್ಚಲು RFID ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa