ಉತ್ತರಾಖಂಡದಲ್ಲಿ ಮಳೆಗೆ 15 ಸಾವು, 16 ಮಂದಿ ಕಾಣೆ
ಡೆಹ್ರಾಡೂನ್, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಉತ್ತರಾಖಂಡದಲ್ಲಿ ಮಳೆ ಮುಂದುವರಿದಿದ್ದು, ಇದುವರೆಗೆ 15 ಮಂದಿ ಸಾವನ್ನಪ್ಪಿ 16 ಮಂದಿ ಕಾಣೆಯಾಗಿದ್ದಾರೆ. ಡೆಹ್ರಾಡೂನ್ ಜಿಲ್ಲೆಯಲ್ಲಿ ಮಾತ್ರ 13 ಮಂದಿ ಬಲಿಯಾಗಿದ್ದಾರೆ. 900 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು,
ಉತ್ತರಾಖಂಡದಲ್ಲಿ ಮಳೆಗೆ 15 ಸಾವು, 16 ಮಂದಿ ಕಾಣೆ


ಡೆಹ್ರಾಡೂನ್, 17 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಉತ್ತರಾಖಂಡದಲ್ಲಿ ಮಳೆ ಮುಂದುವರಿದಿದ್ದು, ಇದುವರೆಗೆ 15 ಮಂದಿ ಸಾವನ್ನಪ್ಪಿ 16 ಮಂದಿ ಕಾಣೆಯಾಗಿದ್ದಾರೆ. ಡೆಹ್ರಾಡೂನ್ ಜಿಲ್ಲೆಯಲ್ಲಿ ಮಾತ್ರ 13 ಮಂದಿ ಬಲಿಯಾಗಿದ್ದಾರೆ.

900 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಕಾರ್ಲಿಗಡ್‌ನಲ್ಲಿ ಸಿಲುಕಿದ್ದ 70 ಜನರನ್ನು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ರಕ್ಷಿಸಿವೆ. ಮಳೆಯಿಂದ ರಸ್ತೆ, ಸೇತುವೆ, ಕಟ್ಟಡಗಳಿಗೆ ವ್ಯಾಪಕ ಹಾನಿಯಾಗಿದೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಪೀಡಿತ ಪ್ರದೇಶಗಳನ್ನು ಭೇಟಿ ಮಾಡಿ, ಪರಿಹಾರ ಕಾರ್ಯ ವೇಗಗೊಳಿಸಲು ಸೂಚನೆ ನೀಡಿದ್ದಾರೆ. ಹವಾಮಾನ ಇಲಾಖೆ ಸೆ.20 ರವರೆಗೆ ಮಳೆಯ ಎಚ್ಚರಿಕೆ ನೀಡಿದೆ.

ಇದೇ ವೇಳೆ, ಜ್ಯೋತಿರ್ಮಠದಲ್ಲಿ ಕಾರು ಸೇತುವೆಯಿಂದ ಬಿದ್ದು ಒಬ್ಬರು ಮೃತಪಟ್ಟಿದ್ದಾರೆ, ಐವರು ಗಾಯಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande