ಕೊಪ್ಪಳ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ ಸಂಸ್ಥೆಯಿದ ಉಚಿತವಾಗಿ ಸೋಲಾರ್ ಟೆಕ್ನಿಷಿಯನ್ ತರಬೇತಿ ಮತ್ತು ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಷನ್ ತರಬೇತಿಗಳಿಗೆ ಆಸಕ್ತ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿರಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
18 ರಿಂದ 45 ವಯೋಮಾನದ ನಿರುದ್ಯೋಗಿ ಯುವಕ ಯುವತಿರಿಗಾಗಿ ಅಕ್ಟೊಬರ್ 6 ರಿಂದ ಸೋಲಾರ್ ಟೆಕ್ನಿಷಿಯನ್ ತರಬೇತಿ ಮತ್ತು ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಷನ್ ಗೆ ಉಚಿತ ತರಬೇತಿಗಳನ್ನು ನೀಡಲಾಗುತ್ತದೆ. ಈ ತರಬೇತಿಗಳು ಸ್ವ-ಉದ್ಯೋಗ ಪ್ರಾರಂಭಿಸಿ, ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿವೆ. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ತರಬೇತಿಯಲ್ಲಿ ಕೌಶಲ್ಯ, ಸಾಧನ ಪ್ರೇರಣ ತರಬೇತಿ, ಉದ್ಯಮಶೀಲತೆಯ ದಕ್ಷ ಗುಣಗಳು, ಹೊಸ ಉದ್ಯಮದ ಸ್ಥಾಪನೆ ಬಗ್ಗೆ ಮಾಹಿತಿ, ಮಾರುಕಟ್ಟೆ ಸಮೀಕ್ಷೆ, ಮಾರಾಟದ ತಂತ್ರಗಳು, ಯಶಸ್ವಿ ಉದ್ಯಮಿಗಳಿಂದ ಅನುಭವ ಹಂಚಿಕೆ, ಕ್ಷೇತ್ರ ಭೇಟಿ, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿನಿಂದ ಸಾಲ ಪಡೆದು ಸ್ವ-ಉದ್ಯೋಗ ಪ್ರಾರಂಭಿಸಲು ಬೇಕಾಗುವ ಜ್ಞಾನ, ಸರಕಾರಿ ಯೋಜನೆಗಳ ಮತ್ತು ಯೋಜನಾ ವರದಿ ತಯಾರಿಕೆ ಇನ್ನಿತರ ಮಾಹಿತಿಗಳನ್ನು ನೀಡಲಾಗುತ್ತದೆ.
ಆಸಕ್ತರು ತಮ್ಮ ಹೆಸರು, ವಿಳಾಸವನ್ನು ಅಕ್ಟೋಬರ್ 1ರ ಒಳಗಾಗಿ ನೋಂದಾಯಿಸಿಕೊಳ್ಳಬಹುದು. ಆನ್‍ಲೈನ್ ವೆಬ್‍ಸೈಟ್‍ನ ತಿತಿತಿ.ಡಿseಣihಚಿಟiಥಿಚಿಟ.oಡಿg ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಸಂಸ್ಥೆಯ ವಾಟ್ಸಾಪ್ ನಂಬರ 9483485489 ಗೆ ಹಾಯ್ ಎಂದು ಸಂದೇಶ ಕಳುಹಿಸಿ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ದೂರವಾಣಿ ಸಂಖ್ಯೆ 9980510717, 7204105812 ಸಂಪರ್ಕಿಸಲು ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ ಸಂಸ್ಥೆಯ ನಿರ್ದೇಶಕರು ಪ್ರಶಾಂತ ಬಡ್ಡಿ,ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್