ಬಳ್ಳಾರಿ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹಿಂದೂ ಧರ್ಮದವರ ಮಧ್ಯೆ ಕ್ರೈಸ್ತರನ್ನು ಸೇರ್ಪಡೆ ಮಾಡಿ ಹಿಂದುಳಿದ ವರ್ಗಗಳ ಜಾತಿ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವುದನ್ನು ಕರ್ನಾಟಕ ಸರ್ಕಾರ ತಕ್ಷಣ ಕೈಬಿಡಲು ಆಗ್ರಹಿಸಿ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು, ರಾಜಕೀಯ ಲಾಭಕ್ಕಾಗಿ ಹಿಂದೂ ಧರ್ಮದವರ ಮಧ್ಯೆ ಕ್ರಿಶ್ಚಿಯನ್ ಜಾತಿಯನ್ನು ಸೇರಿಸಿ ಸಮೀಕ್ಷೆ ನಡೆಸಲು ಕರ್ನಾಟಕ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಲಿಂಗಾಯಿತ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಆದಿ ದ್ರಾವಿಡ ಕ್ರಿಶ್ಚಿಯನ್ ಹೀಗೇ ನಾನಾ ರೀತಿಯಲ್ಲಿ ಮೂಲ ಜಾತಿಯ ಜೊತೆಯಲ್ಲಿ ಕ್ರಿಶ್ಚಿಯನ್ ಪದವನ್ನು ಸೇರಿಸಿರುವುದು ಸರ್ಕಾರದಲ್ಲಿರುವ ಬೌದ್ಧಿಕ ದಿವಾಳಿಗೆ ಸಾಕ್ಷಿ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಕಾ ಅನಿಲ್ ನಾಯ್ಡು, ಕೆ.ಎ. ರಾಮಲಿಮಗಪ್ಪ, ಎಚ್. ಹನುಮಂತಪ್ಪ, ಪಾಟೀಲ್ ಸಿದ್ದಾರೆಡ್ಡಿ, ಗಣಪಾಲ್ ಐನಾಥ ರೆಡ್ಡಿ, ಸುರೇಖಾ ಎಸ್. ಮಲ್ಲನಗೌಡ ಇನ್ನಿತರರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್