ಕೊಪ್ಪಳ ನಗರದಲ್ಲಿರುವ ಬ್ಲಾಕ್ ಸ್ಫಾಟ್‍ಗಳ ನಿರ್ಮೂಲನೆಗೆ ಸೂಚನೆ
ಕೊಪ್ಪಳ, 15 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಎಸ್.ಬಿ.ಎಂ ಯೋಜನೆಯ ದ್ಯೆಯೋದ್ದೇಶಗಳಂತೆ ಕೊಪ್ಪಳ ನಗರದಲ್ಲಿರುವ ಬ್ಲಾಕ್ ಸ್ಫಾಟ್‍ಗಳ ನಿರ್ಮೂಲನೆಗಾಗಿ ಕೊಪ್ಪಳ ನಗರಸಭೆಯಿಂದ ಸೂಚನೆ ನೀಡಲಾಗಿದೆ. ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್(ನ) ಯೋಜನೆಯ ಮುಖ್ಯ ದ್ವೇಯವೇ, ದೇಶದ ಎಲ್ಲಾ
ಕೊಪ್ಪಳ ನಗರದಲ್ಲಿರುವ ಬ್ಲಾಕ್ ಸ್ಫಾಟ್‍ಗಳ ನಿರ್ಮೂಲನೆಗೆ ಸೂಚನೆ


ಕೊಪ್ಪಳ, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಎಸ್.ಬಿ.ಎಂ ಯೋಜನೆಯ ದ್ಯೆಯೋದ್ದೇಶಗಳಂತೆ ಕೊಪ್ಪಳ ನಗರದಲ್ಲಿರುವ ಬ್ಲಾಕ್ ಸ್ಫಾಟ್‍ಗಳ ನಿರ್ಮೂಲನೆಗಾಗಿ ಕೊಪ್ಪಳ ನಗರಸಭೆಯಿಂದ ಸೂಚನೆ ನೀಡಲಾಗಿದೆ.

ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್(ನ) ಯೋಜನೆಯ ಮುಖ್ಯ ದ್ವೇಯವೇ, ದೇಶದ ಎಲ್ಲಾ ನಗರಗಳನ್ನು ಕಸಮುಕ್ತ ನಗರಗಳನ್ನಾಗಿಸುವುದಾಗಿದೆ. ನಗರ ಪ್ರದೇಶಗಳಲ್ಲಿರುವ ಬ್ಲಾಕ್ ಸ್ಫಾಟ್ ಗಳನ್ನು ಶೂನ್ಯಗೊಳಿಸುವ ನಿಟ್ಟಿನಲ್ಲಿ ಸ್ವಚ್ಛತಾ ಹೀ ಸೇವಾ 2025ರ ಅಭಿಯಾನವನ್ನು ಸೆಪ್ಟೆಂಬರ್ 17ನೇ ರಿಂದ ಅಕ್ಟೋಬರ್ 2ರ ವರೆಗೆ ಸ್ವಚ್ಛತಾ ಘಟಕಗಳ ಗುರಿ (ಸಿಟಿಯು) ಯನ್ನು ಸಾಧಿಸುವ ಗುರಿಯನ್ನು ಅಭಿಯಾನದ ರೂಪದಲ್ಲಿ ನಡೆಸಲು ಸೂಚಿಸಲಾಗಿದೆ. ನೂತನ ತಂತ್ರಜ್ಞಾನಗಳ ಅಳವಡಿಕೆ, ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವ ಮತ್ತು ಸಮುದಾಯಗಳ ಪಾಲ್ಗೊಳ್ಳುವಿಕೆಯನ್ನು ಬಳಸಿಕೊಂಡು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಬ್ಲಾಕ್ ಸ್ಫಾಟ್‍ಗಳನ್ನು ಶಾಶ್ವತವಾಗಿ ತೆರವುಗೊಳಿಸಬೇಕು ಮತ್ತು ಅಂತಹ ಬ್ಲಾಕ್ ಸ್ಫಾಟ್‍ಗಳು ಪುನರ್ನಿರ್ಮಾಣವಾಗದಂತೆ ಸುಸ್ಥಿರತೆಯನ್ನು ಕಾಯ್ದುಕೊಳ್ಳಬೇಕಿದೆ.

ಸ್ವಚ್ಛತಾ ಘಟಕಗಳ ಗುರಿಗಳು (ಸಿಟಿಯು): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಬ್ಲಾಕ್ ಸ್ಫಾಟ್‍ಗಳನ್ನು ಗುರುತಿಸಬೇಕು. ಗುರುತಿಸಲಾದ ಎಲ್ಲಾ ಬ್ಲಾಕ್ ಸ್ಫಾಟ್ಸ್‍ಗಳನ್ನು ನಿಗಧಿತ ಕಾಲಮಿತಿಯೊಳಗೆ ಪರಿವರ್ತಿಸಲು ಅಂದರೆ ಬ್ಲಾಕ್ ಸ್ಫಾಟ್‍ಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು. ಬ್ಲಾಕ್ ಸ್ಫಾಟ್‍ಗಳನ್ನು ತೆರವುಗೊಳಿಸುವ ಜೊತೆಗೆ ತೆರವುಗೊಳಿಸಲಾದ ಎಲ್ಲಾ ಜಾಗಗಳನ್ನು ಪರಿವರ್ತಿಸಲು ಗಮನಹರಿಸಬೇಕು.

ಆದಕಾರಣ ಕೊಪ್ಪಳ ನಗರದ ಯಾವುದೇ ರಸ್ತೆಯ ಪಕ್ಕದಲ್ಲಿ, ವೃತ್ತಗಳಲ್ಲಿ, ಖಾಲಿ ನಿವೇಶನಗಳಲ್ಲಿ ಹಾಗೂ ಇನ್ನತರೇ ಸ್ಥಳಗಳಲ್ಲಿ ಕಸ ತ್ಯಾಜ್ಯಗಳನ್ನು ಚಲ್ಲಿ ಬ್ಲಾಕ್ ಸ್ಫಾಟ್ ನಿರ್ಮಾಣವಾಗುವಂತೆ ಕಾರಣವಾಗುವಂತವರಿಗೆ ರಾಷ್ಟ್ರೀಯ ಹಸಿರು ನ್ಯಾಯ ಪೀಠದ ಎನ್.ಜಿ.ಟಿ ಆದೇಶಗಳಂತೆ ಮೊದಲ ಬಾರಿಗೆ ರೂ. 500 ಗಳನ್ನು ದಂಡವಾಗಿ ವಿಧಿಸಲಾಗುವುದು, ಮುಂದುವರೆದಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಕೊಪ್ಪಳ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಜಂಟಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande