ಬಳ್ಳಾರಿ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಖಿಲ ಭಾರತ ಪದ್ಮಶಾಲಿ ಸಂಘದ ನೂತನ ಕಾರ್ಯದರ್ಶಿಯಾಗಿ ಬಳ್ಳಾರಿಯ ಅವ್ವಾರು ಮಂಜುನಾಥ್ ಅವರು ನೇಮಕಗೊಂಡಿದ್ದಾರೆ.
ಅಖಿಲ ಭಾರತ ಪದ್ಮಶಾಲಿ ಸಂಘದ ಅಧ್ಯಕ್ಷರಾದ ಕಂದಗಟ್ಲ ಸ್ವಾಮಿ ಪದ್ಮಶಾಲಿ ಅವರು ಅವ್ವಾರು ಮಂಜುನಾಥ್ ಪದ್ಮಶಾಲಿ ಅವರನ್ನು ನೇಮಕ ಮಾಡಿ ಆದೇಶ ಜಾರಿ ಮಾಡಿದ್ದಾರೆ.
ಅವ್ವಾರು ಮಂಜುನಾಥ್ ಪದ್ಮಶಾಲಿ ಅವರು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾಗಿ - ಹಾಗೂ ಬಳ್ಳಾರಿ ಜಿಲ್ಲೆ ಪದ್ಮಶಾಲಿ ಸಂಘದ ಅಧ್ಯಕ್ಷರಾಗಿ-ವಿವಿಧ ಸಂಘ - ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್